ದೊಡ್ಡಬಳ್ಳಾಪುರ: 'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮದ ಅಂಗವಾಗಿ ದೊಡ್ಡಬಳ್ಳಾಪುರದ ಹೊಸಹಳ್ಳಿ ಗ್ರಾಮದಲ್ಲಿ ಕಂದಾಯ ಸಚಿವ ಆರ್. ಅಶೋಕ್ ಗ್ರಾಮ ವಾಸ್ತವ್ಯ ಹೂಡಿದ್ದಾರೆ.
ರಾತ್ರಿ ಬಾಲಕರ ಹಾಸ್ಟೆಲ್ನಲ್ಲಿ ತಂಗಿದ್ದ ಸಚಿವರು ಬೆಳಗ್ಗೆ ಮಾಕಳಿ ಬೆಟ್ಟದ ತಪ್ಪಲಿನ ಗುಡುಮಗೆರೆ ಹೊಸಹಳ್ಳಿಯ ಕೆರೆಗೆ ಭೇಟಿ ನೀಡಿದ್ದರು. ಕೆರೆಯ ಏರಿ ಮೇಲೆ ವಾಯುವಿಹಾರ ಬೆಳಗಿನ ವಿಹಾರ ಮಾಡಿದ ಸಚಿವರು ಪ್ರಕೃತಿ ಸೌಂದರ್ಯವನ್ನು ಕಣ್ತುಂಬಿಕೊಂಡರು.