ಹೊಸಕೋಟೆ:ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಉಪ್ಪಾರಹಳ್ಳಿಗೆ ಸಚಿವ ಆರ್.ಅಶೋಕ್ ಭೇಟಿ ನೀಡಿದ್ದರು. ಗುಲಾಬಿ ತೋಟವನ್ನು ಪರಿಶೀಲಿಸಿದ ಅವರು, ರೈತರ ಸಮಸ್ಯೆಗಳನ್ನು ಆಲಿಸಿದರು.
ಗುಲಾಬಿ ಬೆಳೆ ಪರಿಶೀಲಿಸಿ ಪರಿಹಾರದ ಭರವಸೆ ನೀಡಿದ ಸಚಿವ ಅಶೋಕ್ - Nandagudi Hobali of Hoskote Taluk
ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಉಪ್ಪಾರಳ್ಳಿಗೆ ಸಚಿವ ಆರ್.ಅಶೋಕ್ ಭೇಟಿ ನೀಡಿದ್ದರು. ಇದೇ ವೇಳೆ ಗುಲಾಬಿ ಬೆಳೆ ಪರಿಶೀಲಿಸಿದ ಸಚಿವರು, ಪರಿಹಾರದ ಬಗ್ಗೆ ಸಿಎಂ ಬಳಿ ಚರ್ಚಿಸುತ್ತೇವೆ ಎಂದು ಹೇಳಿದ್ದಾರೆ.
ಗುಲಾಬಿ ಬೆಳೆ ಪರಿಶೀಲಿಸಿ ರೈತರಿಗೆ ಪರಿಹಾರದ ಭರವಸೆ ನೀಡಿದ ಸಚಿವ..!
ಕೊರೊನಾ ಎಫೆಕ್ಟ್ನಿಂದ ಗುಲಾಬಿ ಹೂವು ಮಾರಲಾಗದೇ ಒಣಗಿ ಹೋಗಿದ್ದು, ಜಿಲ್ಲಾಧಿಕಾರಿಗೆ ಗುಲಾಬಿ ಬೆಳೆ ನಷ್ಟದ ವಿವರಗಳನ್ನ ಪಡೆದು ವರದಿ ನೀಡುವಂತೆ ನಿರ್ದೇಶಿಸಿದರು. ಬಳಿಕ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಧೈರ್ಯ ಹೇಳಿದ ಸಚಿವರು, ಕೊರೊನಾ ವೈರಸ್ ಎಲ್ಲರ ಮೇಲೆ ಪ್ರಭಾವ ಬೀರಿದೆ. ಯಾರು ಬೇಸರ ಮಾಡಿಕೋಳ್ಳಬೇಡಿ. ಪರಿಹಾರ ಕೊಡಿಸುವ ಬಗ್ಗೆ ಸಿಎಂ ಬಳಿ ಚರ್ಚೆ ನಡೆಸುತ್ತೇನೆ ಎಂದ ಹೇಳಿದ್ದಾರೆ.
ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ.ಡಿ.ಚನ್ನಣ್ಣನವರ್ ಉಪಸ್ಥಿತರಿದ್ದರು.