ಹೊಸಕೋಟೆ:ನಾಗಿಣಿ, ನಿಂಬೆಹಣ್ಣಿನ ಡ್ಯಾನ್ಸ್ ನಂತರ ಇದೀಗ ಪೌರಾಣಿಕ ನಾಟಕದ ಹಾಡು ಹಾಡುವ ಮೂಲಕ ವಸತಿ ಸಚಿವ ಎಂಟಿಬಿ ನಾಗರಾಜ್ ಸುದ್ದಿಯಾಗಿದ್ದಾರೆ.
ಪೌರಾಣಿಕ ಹಾಡು ಹಾಡಿ ಗಮನ ಸೆಳೆದ ಸಚಿವ ಎಂಟಿಬಿ ನಾಗರಾಜ್ - undefined
ವಸತಿ ಸಚಿವ ಎಂಟಿಬಿ ನಾಗರಾಜ್ ಅವರು ಮತ್ತೊಮ್ಮೆ ತಮ್ಮಲ್ಲಿನ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ನಾಟಕ ಕಾರ್ಯಕ್ರಮದಲ್ಲಿ ಪೌರಾಣಿಕ ಹಾಡು ಹಾಡುವ ಮೂಲಕ ನೆರೆದಿದ್ದ ಜನರ ಗಮನ ಸೆಳೆದಿದ್ದಾರೆ.
![ಪೌರಾಣಿಕ ಹಾಡು ಹಾಡಿ ಗಮನ ಸೆಳೆದ ಸಚಿವ ಎಂಟಿಬಿ ನಾಗರಾಜ್](https://etvbharatimages.akamaized.net/etvbharat/prod-images/768-512-3165756-thumbnail-3x2-song.jpg)
ನಾಗರಾಜ್
ಕೆಲ ದಿನಗಳ ಹಿಂದೆ ಲೋಕಸಭೆ ಚುನಾವಣಾ ಪ್ರಚಾರದ ವೇಳೆ ನಾಗಿಣಿ ಡ್ಯಾನ್ಸ್, ನಂತರ ಶ್ರೀರಾಮನವಮಿ ಪಲ್ಲಕ್ಕಿ ಉತ್ಸವದಲ್ಲಿ ನಿಂಬೆಹಣ್ಣಿನ ಡ್ಯಾನ್ಸ್ ಮಾಡುವ ಮೂಲಕ ನಾಗರಾಜ್ ಎಲ್ಲ ಡ್ಯಾನ್ಸರ್ಗಳನ್ನು ಹಿಂದಿಕ್ಕಿದ್ದರು. ಸಚಿವರು ಇದೀಗ ಪೌರಾಣಿಕ ನಾಟಕದ ಹಾಡನ್ನು ಹಾಡುವ ಮೂಲಕ ಜನರ ಗಮನ ಸೆಳೆದಿದ್ದಾರೆ.
ಹಾಡು ಹಾಡುತ್ತಿರುವ ಸಚಿವ ಎಂಟಿಬಿ ನಾಗರಾಜ್
ಬೆಂಗಳೂರು ಗ್ರಾಮಾಂತರ ಹೊಸಕೋಟೆ ತಾಲೂಕಿನ ಸೂಲಿಬೆಲೆ ಹೋಬಳಿಯ ಗುಳ್ಳಹಳ್ಳಿ ಗ್ರಾಮದಲ್ಲಿ ನಡೆದ ಕುರುಕ್ಷೇತ್ರ ನಾಟಕದ ವೇಳೆ ಅತಿಥಿಯಾಗಿ ಆಗಮಿಸಿದ್ದ ನಾಗರಾಜ್, ಕರ್ಣನ ಪಾತ್ರದ ಹಾಡನ್ನು ಹಾಡಿದರು. ಹಾಡಿನ ಮೂಲಕ ನೆರೆದಿದ್ದ ಜನರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು.