ದೊಡ್ಡಬಳ್ಳಾಪುರ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪನವರು ರಾಜನಕುಂಟೆ ಗ್ರಾಮ ಪಂಚಾಯಿತಿಗೆ ದಿಢೀರ್ ಭೇಟಿ ನೀಡಿದ ವೇಳೆ ಅಧಿಕಾರಿಗಳ ಯಡವಟ್ಟನಿಂದ ಸಚಿವರು ಮುಜುಗರಕ್ಕೆ ಒಳಗಾದರು.
ಪ್ರೊಜೆಕ್ಟರ್ ಬೋರ್ಡ್‍ನಲ್ಲಿ ಸಿದ್ದರಾಮಯ್ಯ, ಹೆಚ್.ಕೆ. ಪಾಟೀಲ್ ಪ್ರತ್ಯಕ್ಷ... ತುಂಬಿದ ಸಭೆಯಲ್ಲಿ ಈಶ್ವರಪ್ಪಗೆ ಮುಜುಗರ - ರಾಜಾನುಕುಂಟೆ ಗ್ರಾಮ ಪಂಚಾಯಿತಿಗೆ ಈಶ್ವರಪ್ಪ ಭೇಟಿ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪನವರು ರಾಜಾನುಕುಂಟೆ ಗ್ರಾಮ ಪಂಚಾಯತಿಗೆ ದಿಢೀರ್ ಭೇಟಿ ವೇಳೆ ಬಾಪೂಜಿ ಸೇವಾ ಕೇಂದ್ರದ ಪ್ರೊಜೆಕ್ಟರ್ ಬೋರ್ಡ್‍ನಲ್ಲಿ ಇನ್ನೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದು, ಸಭೆಯಲ್ಲಿ ಹಾಲಿ ಸಚಿವ ಕೆ.ಎಸ್.ಈಶ್ವರಪ್ಪ ಮುಜುಗರ ಪಡುವಂತಾಯಿತು.
ಬೆಂಗಳೂರು ಉತ್ತರ ತಾಲೂಕಿನ ರಾಜಾನುಕುಂಟೆ ಗ್ರಾಮ ಪಂಚಾಯಿತಿ ವೀಕ್ಷಣೆ ನಡೆಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರಪ್ಪರವರವರಿಗೆ ಅಧಿಕಾರಿಗಳು ಪ್ರೊಜೆಕ್ಟರ್ ಮೂಲಕ ಭಿತ್ತಿಪತ್ರಗಳ ಪ್ರದರ್ಶನ ನಡೆಸಿದ್ದಾರೆ. ಈ ವೇಳೆ ಬಾಪೂಜಿ ಸೇವಾ ಕೇಂದ್ರದ ಬೋರ್ಡ್ ನಲ್ಲಿ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತು ಹೆಚ್.ಕೆ.ಪಾಟೀಲ್ ಗ್ರಾಮೀಣಾಬಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವರ ಭಿತ್ತಿ ಚಿತ್ರ ಪ್ರದರ್ಶನವಾಗಿದೆ.
ಬಾಪೂಜಿ ಸೇವಾ ಕೇಂದ್ರದ ಪ್ರೊಜೆಕ್ಟರ್ ಬೋರ್ಡ್‍ನಲ್ಲಿ ಇನ್ನೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿದ್ದು, ಸಭೆಯಲ್ಲಿ ಹಾಲಿ ಆರ್.ಡಿ.ಪಿ.ಆರ್ ಸಚಿವ ಕೆ.ಎಸ್.ಈಶ್ವರಪ್ಪ ಮುಜುಗರ ಪಡುವಂತಾಯಿತು. ತಕ್ಷಣವೇ ಎಚ್ಚೆತ್ತ ಅಧಿಕಾರಿಗಳು ಸ್ಕ್ರೀನ್ ಬದಲಾಯಿಸಿದ್ದಾರೆ.