ಕರ್ನಾಟಕ

karnataka

ETV Bharat / state

ಅಡಿಟ್ ಮಾಡಲು ಬಂದ ಅಧಿಕಾರಿಗಳನ್ನೇ ಕೂಡಿ ಹಾಕಿದ ಹಾಲಿನ ಡೈರಿ ಸದಸ್ಯರು! - milk diary members attcks on auditing officers

ಅಡಿಟ್ ಮಾಡಲು ಬಂದ ಅಧಿಕಾರಿಗಳನ್ನೇ ಕೂಡಿ ಹಾಕುವ ಮೂಲಕ ಹಾಡೋನಹಳ್ಳಿ ಹಾಲು ಉತ್ಪಾದಕರ ಸಂಘದ ಸದಸ್ಯರು ದರ್ಪ ಮೆರೆದಿದ್ದಾರೆ ಎಂದು ತಿಳಿದುಬಂದಿದೆ.

officers
ಅಧಿಕಾರಿಗಳನ್ನೇ ಕೂಡಿ ಹಾಕಿದ ಹಾಲಿನ ಡೈರಿ ಸದಸ್ಯರು

By

Published : Dec 17, 2019, 11:38 PM IST

ದೊಡ್ಡಬಳ್ಳಾಪುರ:ಹಾಲು ಉತ್ಪಾದಕರ ಸಂಘದ ಅಡಿಟ್ ಮಾಡಲು ಬಂದ ಅಧಿಕಾರಿಗಳನ್ನ ಹೆದರಿಸಿ ಸಂಘದ ಸದಸ್ಯರೇ ಕೂಡಿಹಾಕಿದ ಘಟನೆ ನಡೆದಿದೆ.

ದೊಡ್ಡಬಳ್ಳಾಪುರ ತಾಲೂಕಿನ ಹಾಡೋನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅವ್ಯವಹಾರದ ಹಿನ್ನೆಲೆ ಅಡಿಟರ್​ಗಳು ಸಂಘಕ್ಕೆ ಭೇಟಿ ನೀಡಿ ಕಡತಗಳ ಪರಿಶೀಲನೆ ನಡೆಸಿದರು. ಅಳತೆ ಮಾಪನಗಳ ಪರಿಶೀಲನೆ ವೇಳೆ ಮಾಪನಗಳ ಅಳತೆಯಲ್ಲಿ ಮೋಸವಾಗುತ್ತಿರುವುದು ಅಡಿಟರ್​​​ಗಳ ಗಮನಕ್ಕೆ ಬಂದಿದೆ. ಈ ಬಗ್ಗೆ ಪ್ರಶ್ನೆ ಮಾಡಿದಾಗ ಅಡಿಟರ್​ಗಳ ಮೇಲೆ ಕಿಡಿಕಾರಿ, ಅವರನ್ನು ಕೂಡಿಹಾಕಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ವಿಷಯ ತಿಳಿದ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಅಡಿಟರ್​ಗಳನ್ನ ಬಿಡುಗಡೆಗೊಳಿಸಿದ್ದಾರೆ. ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರ ವರ್ತನೆಗೆ ಜನರಿಂದ ಸಾಕಷ್ಟು ಆಕ್ರೋಶ ವ್ಯಕ್ತವಾಗಿದೆ.

For All Latest Updates

TAGGED:

ABOUT THE AUTHOR

...view details