ನೆಲಮಂಗಲ: ಉಡವನ್ನು ಕೊಂದು, ಮಾಂಸವನ್ನು ಬೇಯಿಸಿ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ನೆಲಮಂಗಲ ತಾಲೂಕು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಉಡದ ಮಾಂಸ ಸಾಗಾಟ: ಆರೋಪಿ ಅರೆಸ್ಟ್ - ಉಡದ ಮಾಂಸ ಸಾಗಾಟ
ಉಡದ ಮಾಂಸ ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ನೆಲಮಂಗಲ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ.
ಉಡದ ಮಾಂಸ ಸಾಗಾಟ: ಆರೋಪಿ ಅರೆಸ್ಟ್
ಮಲ್ಲಪ್ಪ ಬಿ. ಮುತ್ತಣ್ಣನವರ್ (31) ಬಂಧಿತ ಆರೋಪಿ. ನೆಲಮಂಗಲದಿಂದ ಬೆಂಗಳೂರು ಮಾರ್ಗವಾಗಿ ಟೆಂಪೋದಲ್ಲಿ ಉಡದ ಮಾಂಸವನ್ನು ಸಾಗಿಸುತ್ತಿರುವ ಬಗ್ಗೆ ನೆಲಮಂಗಲ ತಾಲೂಕು ಅರಣ್ಯಾಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ. ಖಚಿತ ಮಾಹಿತಿ ಮೇರೆಗೆ ಮಾದನಾಯಕನ ಹಳ್ಳಿಯ ರಾಷ್ಟ್ರೀಯ ಹೆದ್ದಾರಿ ಸಮೀಪದಲ್ಲಿ ದಾಳಿ ಮಾಡಿದ ಅರಣ್ಯಾಧಿಕಾರಿಗಳ ತಂಡ, ಆರೋಪಿಯನ್ನು ಬಂಧಿಸಿದೆ.
ಬಂಧಿತ ವ್ಯಕ್ತಿಯಿಂದ 600 ಗ್ರಾಂ ಬೇಯಿಸಿದ ಉಡದ ಮಾಂಸ ಹಾಗೂ ಟೆಂಪೋವನ್ನು ವಶಕ್ಕೆ ಪಡೆದಿದ್ದು, ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅನ್ವಯ ದೂರು ದಾಖಲಿಸಿದ್ದಾರೆ.