ಆನೇಕಲ್:ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಸೂರ್ಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತೀಚೆಗೆ ಗಾಂಜಾ ಮತ್ತಿನಲ್ಲಿ ಆನೇಕಲ್ ಸುತ್ತಮುತ್ತ ಅಪರಾಧ ಪ್ರಕರಣಗಳು ಮರುಕಳಿಸುತ್ತಿದ್ದು, ಅದರಲ್ಲೂ ಕೊಲೆಗಳ ಸಂಖ್ಯೆಯೇ ಹೆಚ್ಚು ಎಂಬ ಆರೋಪ ಕೇಳಿ ಬಂದಿತ್ತು.
ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು ಖಾಕಿ ಬಲೆಗೆ - kannadanews
ಆನೇಕಲ್ ಸಮೀಪದ ಗ್ರಾಮವೊಂದರ ಮನೆಯಲ್ಲಿ ಗಾಂಜಾ ಮಾರಾಟಮಾಡುತ್ತಿದ್ದ ಆರೋಪಿಗಳನ್ನು ಪೊಲೀಸರು ಸೆರೆ ಹಿಡಿದಿದ್ದಾರೆ.
ಆನೇಕಲ್ ಸುತ್ತಲಿನ ಖಾಸಗಿ ಕಾಲೇಜುಗಳಲ್ಲಿ ಗಾಂಜಾಗೆ ಬೇಡಿಕೆ ಹೆಚ್ಚಾಗಿತ್ತು ಎನ್ನಲಾಗಿದೆ.ಹಾದಿ-ಬೀದಿಯಲ್ಲೂ ಗಾಂಜಾ ಮಾರಾಟವಾಗುತ್ತಿದ್ದು , ಈ ಕುರಿತು ಕಾರ್ಯಪ್ರವೃತರಾದ ಪೊಲೀಸರು ನಿಖರ ಮಾಹಿತಿ ಮೇರೆಗೆ ಗಾಂಜಾ ಸಮೇತ ಆರೋಪಿಗಳನ್ನ ಬಂಧಿಸಿದ್ದಾರೆ. ಆನೇಕಲ್ ಉಪವಿಭಾಗದ ಸೂರ್ಯಸಿಟಿ ಪೊಲೀಸರು ಹೀಲಲಿಗೆ ಗ್ರಾಮದ ಮನೆಯೊಂದರಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ಮಾಡಿ ಇಬ್ಬರನ್ನು ಬಂಧಿಸಿ ಆರೋಪಿಗಳಿಂದ ಒಂದು ಕೆಜಿ 200 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಗಾರೆ ಕೆಲಸ ಮಾಡಿಕೊಂಡಿದ್ದ ಶ್ರೀನಿವಾಸ್ ಮನೆಯಲ್ಲಿ ಗಾಂಜಾ ಸಿಕ್ಕಿದ್ದು ಈ ಜಾಲದಲ್ಲಿ ಇನ್ನೊಬ್ಬ ಆರೋಪಿ ನೆರಳೂರು ಪ್ರಶಾಂತ್ ಸಿಕ್ಕಿಬಿದ್ದಿದ್ದಾನೆ. ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿರುವ ಪೊಲೀಸರು ಇದೀಗ ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ.