ದೊಡ್ಡಬಳ್ಳಾಪುರ :ಊರಿಗೆ ವಾಪಸ್ ಹೋಗುವ ವಿಚಾರಕ್ಕೆ ಸಂಬಂಧಿಸಿದಂತೆ ಗಂಡ-ಹೆಂಡತಿ ನಡುವೆ ಜಗಳವಾಗಿದೆ. ಇದರಿಂದ ಬೇಸತ್ತ ಪತಿ ನೇಣಿಗೆ(Suicide) ಶರಣಾಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಗೌರಿಬಿದನೂರು ರಸ್ತೆಯ ಹಸನಘಟ್ಟ ಕ್ರಾಸ್ ಬಳಿ ಇಂದು ಮುಂಜಾನೆ 3 ಗಂಟೆ ಸಮಯದಲ್ಲಿ ಈ ಘಟನೆ ನಡೆದಿದೆ. ಘಟನೆಯಲ್ಲಿ ನಂಜುಂಡ (42) ಎಂಬಾತ ನೇಣಿಗೆ ಶರಣಾಗಿದ್ದಾರೆ.
ಮೃತ ವ್ಯಕ್ತಿ ಗೌರಿಬಿದನೂರು ತಾಲೂಕಿನ ಹಿರೇಬಿದನೂರು ಗ್ರಾಮದ ನಿವಾಸಿಯಾಗಿದ್ದಾರೆ. ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ಸಿಲ್ವರ್ ಪಾರ್ಕ್‌ನಲ್ಲಿ (Doddaballapur Industrial Area) ಕೆಲಸ ಮಾಡುತ್ತಿದ್ದರು.