ಆನೇಕಲ್ :ಶೀಲ ಶಂಕಿಸಿ ಪತ್ನಿಯನ್ನು ಭೀಕರವಾಗಿ ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆನೇಕಲ್ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.
ಪತ್ನಿಯನ್ನ ಭೀಕರವಾಗಿ ಕೊಚ್ಚಿ ಕೊಂದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ - ಪತ್ನಿ ಕೊಂದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ
ಪತ್ನಿಯನ್ನ ಭೀಕರವಾಗಿ ಕೊಚ್ಚಿ ಕೊಂದಿದ್ದ ಆರೋಪಿಗೆ ಇಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ಪ್ರಕಟಿಸಿದೆ.
ಆರೋಪಿ ನಾಗೇಶ್ಗೆ ಜೀವಾವಧಿ ಶಿಕ್ಷೆ ವಿಧಿಸಿ ಆನೇಕಲ್ ಸತ್ರ ನ್ಯಾಯಾಲಯ ಆದೇಶ ನೀಡಿದೆ. ಕಳೆದ 2016ರ ಆಗಷ್ಟ್ 13ರಂದು ನಾಗೇಶ್ ತನ್ನ ಪತ್ನಿ ಮಲ್ಲಿಕಾಳನ್ನ ಭೀಕರವಾಗಿ ಕೊಂದಿದ್ದ ಪ್ರಕರಣ 5ವರ್ಷ ನಾಲ್ಕು ತಿಂಗಳ ತರುವಾಯ ಅಂತ್ಯ ಕಂಡಿದೆ.
ಆನೇಕಲ್ ತಾಲೂಕಿನ ಕಂಬಳೀಪುರ ಗ್ರಾಮದಲ್ಲಿ ಕೊಲೆ ನಡೆದಿದ್ದು, ಆಗಿನ ಅತ್ತಿಬೆಲೆ ವೃತ್ತ ನಿರೀಕ್ಷಕರಾಗಿದ್ದ ಎಲ್ ವೈ ರಾಜೇಶ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡಿದ್ದರು. ಸುದೀರ್ಘ ವಿಚಾರಣೆ ನಂತರ ಪತ್ನಿ ಮಲ್ಲಿಕಾಳ ಸಾವಿಗೆ ನ್ಯಾಯ ದೊರಕಿದಂತಾಗಿದೆ. ಈ ತೀರ್ಪಿನಿಂದ ಪೊಲೀಸ್ ಮತ್ತು ನ್ಯಾಯಾಲಯದ ಮೇಲೆ ನಾಗರೀಕರಿಗೆ ತುಸು ವಿಶ್ವಾಸ ಮೂಡಿದಂತಾಗಿದೆ.