ಕರ್ನಾಟಕ

karnataka

ETV Bharat / state

ಪ್ರೇಮ ಪ್ರಕರಣಕ್ಕೆ ಜೈಲು ಪಾಲಾದ, ಸಹಾಯಕ್ಕೆ ಬರಲಿಲ್ಲ ಎಂದು ಅಣ್ಣನ ಮಗನ ಕೊಲೆಗೈದ ಪಾಪಿ! - ಪ್ರೇಮ ಪ್ರಕರಣದಲ್ಲಿ ಅಣ್ಣನ ಮಗನ ಕೊಲೆ

ಪ್ರೇಮ ಪ್ರಕರಣದಲ್ಲಿ ಅಣ್ಣ ಸಹಾಯ ಮಾಡಲಿಲ್ಲ ಎಂಬ ಕಾರಣದಿಂದಾಗಿ ಆತನ ಮಗನ ಕೊಲೆ ಮಾಡಿರುವ ಪಾಪಿ ತಮ್ಮ ಕೊನೆಗೂ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ.

Man murder his brother son
Man murder his brother son

By

Published : Oct 31, 2020, 1:29 AM IST

Updated : Oct 31, 2020, 5:45 AM IST

ನೆಲಮಂಗಲ:ಪ್ರೇಮ ಪ್ರಕರಣದಲ್ಲಿ ತಾನು ಜೈಲಿಗೆ ಹೋಗುವುದನ್ನ ಅಣ್ಣ ತಪ್ಪಿಸಬಹುದಿತ್ತು. ಆದರೆ ನನಗೆ ಆತ ಸಹಾಯ ಮಾಡಲಿಲ್ಲ ಎಂಬ ದ್ವೇಷದಲ್ಲಿ ಆತನ ಮಗನನ್ನೇ ಕೊಲೆ ಮಾಡಿರುವ ಘಟನೆ ನಡೆದಿದೆ.

ಕೊಲೆಯಾದ ಅಣ್ಣನ ಮಗ ರಿಯಾನ್​

ಅಕ್ಟೋಬರ್​ 22ರಂದು ಈ ಘಟನೆ ದಾನೋಜಿಪಾಳ್ಯದಲ್ಲಿ ನಡೆದಿದ್ದು, ಇಡೀ ನೆಲಮಂಗಲವನ್ನೇ ಬೆಚ್ಚಿ ಬಿಳಿಸಿತ್ತು. ದಾನೋಜಿಪಾಳ್ಯದಲ್ಲಿ ಕಳೆದ 20 ವರ್ಷಗಳಿಂದ ಚಮನ್ ಹಾಗೂ ಆಯಿಷಾ ದಂಪತಿ ವಾಸವಾಗಿದ್ದರು. ಗಾರೆ ಕೆಲಸ ಮಾಡ್ತಿದ್ದ ಇವರಿಗೆ ಎರಡು ಪುಠಾಣಿ ಮಕ್ಕಳಿದ್ದರು.

ನೀರಿನ ಟ್ಯಾಂಕ್​ನಲ್ಲಿ ಬಾಲಕನ ಮೃತದೇಹ ಎಸೆದ ದಾದಾಪೀರ್​

ಅಕ್ಟೋಬರ್​ 22 ರಂದು ಮನೆ ಮುಂದೆ ಆಟವಾಡುತ್ತಿದ್ದ ಗಂಡು ಮಗ ರಿಯಾನ್​ ನಾಪತ್ತೆಯಾಗಿದ್ದನು. ಈ ವೇಳೆ ಪೋಷಕರು ಹುಡುಕಾಟ ನಡೆಸಿದ್ದರೂ, ಅತನ ಸುಳಿವು ಸಿಕ್ಕಿರಲಿಲ್ಲ. ಆದರೆ ಪಕ್ಕದ ಮನೆಯ ನಲ್ಲಿಯಲ್ಲಿ ರಕ್ತ ಮಿಶ್ರಿತ ನೀರು ಬರುತ್ತಿದ್ದಂತೆ ಮನೆಯ ಮೇಲಿನ ಸಿಂಟೆಕ್​ ಟ್ಯಾಂಕ್​ನಲ್ಲಿ ನೋಡಿದಾಗ ಮೃತ ರಿಯಾನ್​ ಶವ ಪತ್ತೆಯಾಗಿತ್ತು.

ಏನಿದು ಘಟನೆ!?

ಊರಿನಲ್ಲಿ ನಡೆದ ಪ್ರೇಮ ಪ್ರಕರಣಕ್ಕೆ ತನಗೆ ಅಣ್ಣ ಬೆಂಬಲ ನೀಡಲಿಲ್ಲ ಎಂದು ತಮ್ಮ ಈ ಕೃತ್ಯವೆಸಗಿದ್ದನು. ಚಮನ್​ ಜತೆ ದಾದಾಪೀರ್​ ಗಾರೆ ಕೆಲಸ ಮಾಡ್ತಿದ್ದನು. ಈ ವೇಳೆ ಆತ ಬೇರೆ ಜಾತಿ ಹುಡುಗಿ ಜತೆ ಪ್ರೇಮದ ಬಲೆಯಲ್ಲಿ ಬಿದ್ದಿದ್ದನು.

ಕೊಲೆ ಆರೋಪಿ ದಾದಾಪೀರ್​

ಹರಪನಹಳ್ಳಿಗೆ ಹೋಗಿದ್ದ ವೇಳೆ ಹುಡುಗಿ ಮನೆಯವರಿಗೂ ದಾದಾಪೀರ್ ಕುಟುಂಬಕ್ಕೂ ಜಗಳವಾಗಿತ್ತು. ಈ ವೇಳೆ ಹುಡುಗಿ ಮನೆಯವರು ಈತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು ಮಾಡಿದ್ದರು .ಹೀಗಾಗಿ ಆತ ಜೈಲುಪಾಲಾಗಿದ್ದನು. ಈ ವೇಳೆ ಚಮನ್​ ಆತನ ಸಹಾಯಕ್ಕೆ ಬಂದಿರಲಿಲ್ಲ.

ಅಣ್ಣನ ಮಗನ ಕೊಲೆಗೈದ ಪಾಪಿ

15 ದಿನಗಳ ನಂತರ ಜೈಲಿನಿಂದ ಹೊರಬಂದಿರುವ ದಾದಾಪೀರ್​, ರಿಯಾನ್​ನನ್ನ ಕೊಲೆ ಮಾಡಿ, ಮನೆಯ ಮೇಲಿಂದ ನೀರಿನ ಟ್ಯಾಂಕ್​ನೊಳಗೆ ಎಸೆದು ಪರಾರಿಯಾಗಿದ್ದನು.

ಪ್ರಕರಣ ಬೇಧಿಸಿದ ಪೊಲೀಸರು

ನೆಲಮಂಗಳ ನಗರ ಪೊಲೀಸ್ ಠಾಣೆಯಲ್ಲಿ ರಿಯಾನ್​ ಕೊಲೆ ಪ್ರಕರಣ ದಾಖಲಾಗಿತ್ತು. ಎಸ್ಪಿ ರವಿ. ಡಿ ಚೆನ್ನಣ್ಣನವರ ಮಾರ್ಗದರ್ಶನದಲ್ಲಿ ಇನ್ಸ್​ಪೆಕ್ಟರ್​ ಶಿವಣ್ಣ, ಪಿಎಸ್ಐ ಸುರೇಶ್​, ಪೇದೆಗಳಾದ ನರೇಶ್​, ಬಸವರಾಜ್​ ಪ್ರತ್ಯೇಕ ತಂಡ ರಚನೆ ಮಾಡಿ ಆರೋಪಿಗಾಗಿ ಬಲೆ ಬೀಸಿದ್ದರು.

ಕೊಲೆ ಮಾಡಿದ ದಿನ ಆರೋಪಿ ದಾದಾಪೀರ್​ ಕೇವಲ 150 ರೂಪಾಯಿಗೆ ತನ್ನ ಮೊಬೈಲ್​ ಮಾರಿಕೊಂಡು, ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದನು. ಆತ ನಗರದ ಕೆ.ಆರ್. ಮಾರ್ಕೆಟ್, ಮೆಜೆಸ್ಟಿಕ್, ಯಶವಂತಪುರ ಸೇರಿದಂತೆ ವಿವಿಧೆಡೆ ಅಲೆದಾಡಿದ್ದನು. ಈ ಮಾಹಿತಿ ಮೇರೆಗೆ ಇದೀಗ ಪೊಲೀಸರು ಆತನ ಬಂಧನ ಮಾಡಿದ್ದಾರೆ.

Last Updated : Oct 31, 2020, 5:45 AM IST

ABOUT THE AUTHOR

...view details