ಕರ್ನಾಟಕ

karnataka

ETV Bharat / state

ಸ್ನೇಹಿತರ ಜೊತೆಗೂಡಿ ಎಣ್ಣೆ ಪಾರ್ಟಿ.. ಮತ್ತೇರಿದ ಮೇಲೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ.. - .ಮತ್ತೇರಿದ ಮೇಲೆ ಗಲಾಟೆ ಕೊಲೆಯಲ್ಲಿ ಅಂತ್ಯ

ಮೃತ ಸುಧಾಕರ್ ಲಾರಿ ಚಾಲಕನಾಗಿದ್ದು, ಸತ್ಯವಾರದಲ್ಲಿ ಏಕಾಂಗಿಯಾಗಿ ವಾಸವಾಗಿದ್ದ. ನಿನ್ನೆ ರಾತ್ರಿ ಆರೋಪಿಗಳ ಜೊತೆ ಎಣ್ಣೆ ಪಾರ್ಟಿ ಮಾಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿತ್ತು. ಈ ವೇಳೆ ಅವಾಚ್ಯ ಪದ ಬಳಸಿ ಪರಸ್ಪರ ಬೈದಾಡಿಕೊಂಡಿದ್ದರು..

man-killed-by-his-friends
ಎಣ್ಣೆ ಪಾರ್ಟಿಯಲ್ಲಿ ಕೊಲೆಯಾದ ಸ್ನೇಹಿತ

By

Published : Nov 30, 2021, 8:59 PM IST

ಹೊಸಕೋಟೆ (ಬೆಂ.ಗ್ರಾ) :ಅವಾಚ್ಯ ಪದಗಳಿಂದ ನಿಂದಿಸಿದ ಎಂದು ಕುಡಿದ ಅಮಲಿನಲ್ಲಿ ಸ್ನೇಹಿತನನ್ನೆ ಕೊಲೆ ಮಾಡಿರುವ ದಾರುಣ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕೆ.ಸತ್ಯವಾರ ಗ್ರಾಮದಲ್ಲಿ ನಡೆದಿದೆ.

ಎಣ್ಣೆ ಪಾರ್ಟಿ ವೇಳೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಎಂದು ಸ್ನೇಹಿತರೇ ಸೇರಿ ದೊಣ್ಣೆಯಿಂದ ಹೊಡೆದು ಚಾಕುವಿನಿಂದ ಇರಿದು ಕೊಲೆಗೈದಿದ್ದಾರೆ.

ದಾವಣಗೆರೆ ಮೂಲದ ಸುಧಾಕರ್ (43) ಎಂಬುವರು ಕೊಲೆಯಾಗಿರುವ ದುರ್ದೈವಿ. ಕೆ.ಸತ್ಯವಾರ ಗ್ರಾಮದ ನಾಗಭೂಷಣ್ ಅಲಿಯಾಸ್ ನಾಗ, ಚಂದ್ರಶೇಖರ್ ಅಲಿಯಾಸ್ ಚಂದ್ರು, ಬಾಬು ಅಲಿಯಾಸ್ ಪೈಂಟರ್ ಬಾಬು ಆರೋಪಿಗಳಾಗಿದ್ದಾರೆ.

ಸ್ನೇಹಿತನ ಕೊಲೆಗೈದ ಆರೋಪಿಗಳು

ಮೃತ ಸುಧಾಕರ್ ಲಾರಿ ಚಾಲಕನಾಗಿದ್ದು, ಸತ್ಯವಾರದಲ್ಲಿ ಏಕಾಂಗಿಯಾಗಿ ವಾಸವಾಗಿದ್ದ. ನಿನ್ನೆ ರಾತ್ರಿ ಆರೋಪಿಗಳ ಜೊತೆ ಎಣ್ಣೆ ಪಾರ್ಟಿ ಮಾಡಿದ್ದು, ಈ ವೇಳೆ ಮಾತಿಗೆ ಮಾತು ಬೆಳೆದು ಗಲಾಟೆ ನಡೆದಿತ್ತು. ಈ ವೇಳೆ ಅವಾಚ್ಯ ಪದ ಬಳಸಿ ಪರಸ್ಪರ ಬೈದಾಡಿಕೊಂಡಿದ್ದರು.

ಕೊಲೆಯಾದ ಸ್ಥಳದಲ್ಲಿ ಪೊಲೀಸರಿಂದ ಪರಿಶೀಲನೆ..

ಆದರೆ, ಇಷ್ಟಕ್ಕೆ ಸುಮ್ಮನಾಗದ ಹಂತಕರು ಸ್ನೇಹಿತನನ್ನ ಕೊಲೆಗೈದಿದ್ದಾರೆ. ಸ್ಥಳಕ್ಕೆ ನಂದಗುಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:ಜೂಜಾಟದಲ್ಲಿ ಹೆಂಡ್ತಿ ಪಣಕ್ಕಿಟ್ಟು ಸೋತ ಗಂಡ.. ಹಣ ನೀಡದಕ್ಕಾಗಿ 'ತಲಾಖ್'​ ನೀಡಿದ!

ABOUT THE AUTHOR

...view details