ಕರ್ನಾಟಕ

karnataka

ETV Bharat / state

ಬದುಕಿನ ಕಡೇಯ ಕ್ಷಣಗಳಲ್ಲಿ ತನ್ನ 'ಬಂಗಾರಿ'ಗೆ ಹೀಗೊಂದು ಮನವಿ ಮಾಡಿದ ಯುವಕ! - ರೇಬೀಸ್ ರೋಗದಿಂದಾಗಿ ಸಾವು

ಲೈವ್ ವಿಡಿಯೋ ಮಾಡಿ, ಪ್ರಿಯತಮೆಯನ್ನು ತನ್ನ ಅಂತ್ಯಕ್ರಿಯೆಗೆ ಬರುವಂತೆ ಆಹ್ವಾನಿಸಿ ಪ್ರೇಮಿಯೊಬ್ಬ ಕೊನೆಯುಸಿರೆಳೆದಿದ್ದಾನೆ.

lover-died-while-making-a-live-video-and-inviting-his-lover-to-funeral-in-nelamagala
ಸಾಯುವ ಕೊನೆ ಕ್ಷಣದಲ್ಲಿ ವಿಡಿಯೋ ಮಾಡಿ ಪ್ರಿಯತಮೆಗೆ ಅಂತ್ಯಕ್ರಿಯೆಗೆ ಬರುವಂತೆ ಆಹ್ವಾನ ನೀಡಿದ ಪ್ರೇಮಿ!

By

Published : Aug 13, 2023, 5:25 PM IST

Updated : Aug 16, 2023, 9:56 PM IST

ನೆಲಮಂಗಲ (ಬೆಂಗಳೂರು): ರೋಗ ಉಲ್ಬಣಗೊಂಡು ಸಾಯುವ ಕೊನೆಕ್ಷಣದಲ್ಲಿ ವಿಡಿಯೋ ಮಾಡಿದ ಪ್ರಿಯಕರನೊಬ್ಬ, ಪ್ರಿಯತಮೆಗೆ ತನ್ನ ಅಂತ್ಯಕ್ರಿಯೆಗೆ ಬರುವಂತೆ ಆಹ್ವಾನ ನೀಡಿ ಅಸುನೀಗಿದ್ದಾನೆ. ನೆಲಮಂಗಲ ತಾಲೂಕಿನ ದಾಬಸ್ ಪೇಟೆಯ ಕಿರಣ್ (22) ಮೃತಪಟ್ಟ ಯುವಕ. ಆಗಸ್ಟ್ 9ರಂದು ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಘಟನೆಯ ವಿವರ: ಕಿರಣ್ ರೇಬೀಸ್ ರೋಗದಿಂದಾಗಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದ. ಯುವಕನಿಗೆ ತನ್ನ ಸಾವಿನ ಕ್ಷಣಗಳು ಸಮೀಪಿಸುತ್ತಿರುವ ಅರಿವಾಗಿತ್ತು. ಹೀಗಾಗಿ, ಪ್ರೀತಿಸಿದ ಹುಡುಗಿಯ ನೆನಪಾಗಿ ಬದುಕಿನ ಕಡೇಯ ಕ್ಷಣಗಳಲ್ಲಿ ಲೈವ್ ವಿಡಿಯೋ ಮಾಡಿದ್ದಾನೆ.

"ಹಾಯ್ ಬಂಗಾರಿ, ನಿಮ್ಮನ್ನೆಲ್ಲ ಬಿಟ್ಟು ಹೋಗುತ್ತಿದ್ದೇನೆ. ನಿಮ್ಮ ಅಪ್ಪ ಹೇಳಿದ ಹಾಗೆಯೇ ಒಳ್ಳೆಯ ಹುಡುಗನನ್ನು ನೋಡಿ ಮದುವೆಯಾಗು. ನಿನಗೆ ಹುಟ್ಟಿದ ಮಗುವಿಗೆ ನನ್ನ ಹೆಸರಿಡು. ಇದು ನನ್ನ ಆಕಸ್ಮಿಕ ಸಾವು. ದಯವಿಟ್ಟು ಅಂತ್ಯಕ್ರಿಯೆಗೆ ಬಂದು ಹೋಗು. ನನ್ನ ಸಾವಿಗೆ ನಿನ್ನ ತಂಗಿಯನ್ನು ಕರೆದುಕೊಂಡು ಬಾ. ನಿಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ. ಹೀಗೆಯೇ ಚೆನ್ನಾಗಿರಿ" ಎಂದು ಕಿರಣ್ ಲೈವ್​​ನಲ್ಲಿ ಕೈ ಮುಗಿದು ಆಸ್ಪತ್ರೆಯ ಬೆಡ್ ಮೇಲೆ ಪ್ರಾಣಬಿಟ್ಟಿದ್ದಾನೆ.

ಇದನ್ನೂ ಓದಿ:Upendra: ಸಾಮಾಜಿಕ ಜಾಲತಾಣದಲ್ಲಿ ಆಕ್ಷೇಪಾರ್ಹ ಪದ ಬಳಕೆ ಆರೋಪ; ಉಪೇಂದ್ರ ವಿರುದ್ಧ FIR

ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು (ರಾಮನಗರ):ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮನನೊಂದು ಪ್ರೇಮಿಗಳಿಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ರಾಮನಗರ ಹೊರವಲಯದ ಕುಂಬಾಪುರ ಗೇಟ್ ಬಳಿ ಇತ್ತೀಚೆಗೆ ನಡೆದಿತ್ತು. ನವ್ಯ (19) ಹಾಗೂ ಹರ್ಷವರ್ಧನ (20) ಆತ್ಮಹತ್ಯೆಗೆ ಶರಣಾಗಿದ್ದರು. ಇಬ್ಬರ ಪ್ರೀತಿಗೆ ಪೋಷಕರು ವಿರೋಧ ವ್ಯಕ್ತಪಡಿಸಿದ್ದರು ಎನ್ನಲಾಗಿತ್ತು. ಹೀಗಾಗಿ ಮನನೊಂದ ಪ್ರೇಮಿಗಳು ಬೈಕ್​ನಲ್ಲಿ ರಾಮನಗರ ಹೊರವಲಯದ ಕುಂಬಾಪುರ ಗೇಟ್ ಬಳಿಗೆ ಬಂದು ಬೈಕ್​​ ಅನ್ನು ದೂರದಲ್ಲಿ ನಿಲ್ಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಚನ್ನಪಟ್ಟಣ ರೈಲ್ವೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಇದನ್ನೂ ಓದಿ:ಪ್ರೇಯಸಿಗಾಗಿ ಟೆರೇಸ್ ಮೇಲೆ ಹೋಗಿ ಪಿಜ್ಜಾ ಕೊಟ್ಟ ಪ್ರೇಮಿ.. ಆಕೆಯ ತಂದೆಯನ್ನು ಕಂಡು 4ನೇ ಮಹಡಿಯಿಂದ ಜಿಗಿದವನು ಸಾವು

ಅಪ್ರಾಪ್ತ ಪ್ರೇಮಿಗಳು ಆತ್ಮಹತ್ಯೆ (ವಿಜಯಪುರ):ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೆಲವು ತಿಂಗಳುಗಳ ಹಿಂದೆವಿಜಯಪುರ ಜಿಲ್ಲೆ ನಿಡಗುಂದಿ ಪಟ್ಟಣದಲ್ಲಿ ನಡೆದಿತ್ತು. 17 ವರ್ಷದ ಹುಡುಗ ಹಾಗೂ 15 ವರ್ಷದ ಬಾಲಕಿ ಮೃತಪಟ್ಟಿದ್ದರು. ಮನೆಯಿಂದ ಹೊರಹೋಗುವುದಾಗಿ ಹೇಳಿದ್ದರು. ನಂತರ ನಿರ್ಜನ ಪ್ರದೇಶದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಕೂಡಗಿ ಎನ್‌ಟಿಪಿಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ:ಅನ್ಯ ಕೋಮಿನ ಹುಡುಗ-ಹುಡುಗಿ ಮಧ್ಯೆ ಲವ್​.. ವಿವಾದವೆಬ್ಬಿಸಿದ 18 ವಿದ್ಯಾರ್ಥಿಗಳನ್ನು ಮನೆಗೆ ಕಳಿಸಿದ ಕಾಲೇಜ್

Last Updated : Aug 16, 2023, 9:56 PM IST

ABOUT THE AUTHOR

...view details