ಕರ್ನಾಟಕ

karnataka

ETV Bharat / state

ಆನೇಕಲ್: ತೆಂಗಿನ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು - ಆನೇಕಲ್ ಪೊಲೀಸ್​ ಠಾಣೆ

ತೆಂಗಿನ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ ತಾಲೂಕಿನ ಇಂಡ್ಲವಾಡಿ ಬಳಿ ನಡೆದಿದೆ.

Man dies from falling from coconut tree
ತೆಂಗಿನ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು

By

Published : Mar 19, 2021, 8:23 PM IST

ಆನೇಕಲ್​:ತೆಂಗಿನ ಮರದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಮೃತಪಟ್ಟಿರುವ ಘಟನೆ ಕೋಣನ ಕುಂಟೆ ಬಳಿಯ ಇಂಡ್ಲವಾಡಿಯಲ್ಲಿ ನಡೆದಿದೆ.

ಕಾಂತರಾಜು (28) ಮೃತ ವ್ಯಕ್ತಿ. ಈತನನ್ನು ತೆಂಗಿನ ಗರಿ ಕತ್ತರಿಸಲು ಇಂಡ್ಲವಾಡಿ ಮಹದೇವಪ್ಪ ಎಂಬುವವರು ಕರೆತಂದಿದ್ದರು. ಈ ವೇಳೆ 50 ಅಡಿ ಎತ್ತರದ ಮರದಿಂದ ಕೆಳಗೆ ಬಿದ್ದ ಕಾಂತರಾಜು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಘಟನಾ ಸ್ಥಳಕ್ಕೆ ಆನೇಕಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details