ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ):ಪಾರಿವಾಳ ಹಿಡಿಯಲು ಹೋದ ವ್ಯಕ್ತಿಯೋರ್ವ 120 ಅಡಿಯ ಪಾಳುಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ತಾಲೂಕಿನ ಪಿ. ರಂಗನಾಥಪುರ ಗ್ರಾಮದಲ್ಲಿ ನಡೆದಿದೆ.
ಪಾರಿವಾಳ ಹಿಡಿಯಲು ಹೋಗಿ 120 ಅಡಿ ಪಾಳುಬಾವಿಗೆ ಬಿದ್ದು ವ್ಯಕ್ತಿ ಸಾವು - Man dies after falling Well
ಪಾರಿವಾಳ ಹಿಡಿಯಲು ಹೋದ ವ್ಯಕ್ತಿಯೋರ್ವ 120 ಅಡಿಯ ಪಾಳುಬಾವಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ದೇವನಹಳ್ಳಿ ತಾಲೂಕಿನ ಪಿ. ರಂಗನಾಥಪುರ ಗ್ರಾಮದಲ್ಲಿ ನಡೆದಿದೆ.
ಪಾರಿವಾಳ ಹಿಡಿಯಲು ಹೋಗಿ 120 ಅಡಿ ಪಾಳುಬಾವಿಗೆ ಬಿದ್ದು ವ್ಯಕ್ತಿ ಸಾವು
ಪಿ.ರಂಗನಾಥಪುರ ಗ್ರಾಮದ ನಿವಾಸಿ ಮುನಿರಾಜು (35) ಮೃತ ರ್ದುದೈವಿ. ಮುನಿರಾಜು ಬುಧವಾರ ಸಂಜೆ 5 ಸುಮಾರಿಗೆ ಪಾರಿವಾಳ ಹಿಡಿಯಲು ಹೋಗಿದ್ದರು. ಈ ವೇಳೆ ಕಾಲು ಜಾರಿ 120 ಅಡಿಯ ಪಾಳುಬಾವಿಗೆ ಬಿದ್ದು ಸಾವನ್ನಪ್ಪಿದ್ದಾರೆ.
ಅಗ್ನಿಶಾಮಕ ದಳದ ಸಿಬ್ಬಂದಿ ಮತ್ತು ಪೊಲೀಸರು ಜಂಟಿ ಕಾರ್ಯಚರಣೆ ಕೈಗೊಂಡು ಶವ ಮೇಲೆತ್ತಿದ್ದಾರೆ.