ಕರ್ನಾಟಕ

karnataka

By

Published : Nov 4, 2022, 11:57 AM IST

ETV Bharat / state

ವಾಚ್​​ನೊಳಗೆ ಬಚ್ಚಿಟ್ಟು ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕ ಕಸ್ಟಮ್ಸ್ ಬಲೆಗೆ

ವಾಚ್​​ನೊಳಗೆ ಮರೆಮಾಚಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾನೆ.

man-detained-for-smuggling-gold-in-watch
ವಾಚ್​​ನೊಳಗೆ ಬಚ್ಚಿಟ್ಟು ಚಿನ್ನ ಸಾಗಿಸುತ್ತಿದ್ದ ಪ್ರಯಾಣಿಕ ಕಸ್ಟಮ್ಸ್ ಬಲೆಗೆ

ದೇವನಹಳ್ಳಿ:ವಾಚ್​​ನೊಳಗೆಮರೆಮಾಚಿ ಚಿನ್ನ ಸಾಗಾಣಿಕೆ ಮಾಡುತ್ತಿದ್ದ ಪ್ರಯಾಣಿಕ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದು, ಆತನಿಂದ 15 ಲಕ್ಷ ಮೌಲ್ಯದ 298.83 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿದೆ.

ನವೆಂಬರ್ 2ರಂದು ಬಹರೈನ್​ನಿಂದ ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕ ಆಗಮಿಸಿದ್ದ. ವಾಯು ಗುಪ್ತಚರ ಘಟಕ(AIU)ದ ಅಧಿಕಾರಿಗಳು ತಪಾಸಣೆ ನಡೆಸಿದಾಗ ಚಿನ್ನ ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ.

ಆರೋಪಿಯು ತನ್ನ ಕೈಗಡಿಯಾರದೊಳಗೆ ಎರಡು ವೃತ್ತಾಕಾರದ ಚಿನ್ನದ ತುಣಕುಗಳನ್ನು ಇಟ್ಟುಕೊಂಡಿದ್ದ. ಇದರ ಜೊತೆಗೆ ಚಿನ್ನದ ತಂತಿಗೆ ರೇಡಿಯಮ್ ಲೇಪಿಸಿದ ಎರಡು ತಂತಿಗಳು ಟ್ರಾಲಿ ಬ್ಯಾಗ್​ನಲ್ಲಿ ಪತ್ತೆಯಾಗಿದೆ. ಆರೋಪಿಯಿಂದ 15,56,913 ಮೌಲ್ಯದ 298.83 ಗ್ರಾಂ ತೂಕದ ಚಿನ್ನ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:ಪಾದರಕ್ಷೆ, ಬನಿಯಾನ್‌, ಗುದನಾಳದಲ್ಲೂ ಚಿನ್ನ..: 10 ದಿನ, ₹1.46 ಕೋಟಿಯ ಮಾಲು ವಶ

ABOUT THE AUTHOR

...view details