ಕರ್ನಾಟಕ

karnataka

ETV Bharat / state

ತಾಯಿ ಜೊತೆ ಲೀವಿಂಗ್​ ಟುಗೆದರ್​ನಲ್ಲಿದ್ದ ವ್ಯಕ್ತಿಯಿಂದ ಮಗುವಿನ ಮೇಲೆ ಹಲ್ಲೆ : ಸಾರ್ವಜನಿಕರಿಂದ ಗೂಸಾ - ಸಾರ್ವಜನಿಕರಿಂದ ಗೂಸಾ ತಿಂದ ವ್ಯಕ್ತಿ

ಮಹಿಳೆ ಜೊತೆ ಲಿವಿಂಗ್​ ಟುಗೆದರ್​ನಲ್ಲಿದ್ದ ವ್ಯಕ್ತಿಯೋರ್ವ ಆಕೆಯ ಮಗುವಿನ ಮೇಲೆ ದೌರ್ಜನ್ಯವೆಸಗಿರುವ ಘಟನೆ ನಡೆದಿದೆ. ವಿಷಯ ತಿಳಿದ ಜನ ಆತನಿಗೆ ಸರಿಯಾಗಿ ಗೂಸಾ ನೀಡಿದ್ದಾರೆ.

ಮಗುವಿಗೆ ಬಲವಾಗಿ ಕೆನ್ನೆ ಕಚ್ಚಿದ ವ್ಯಕ್ತಿ,  man bit baby cheek strongly a Doddaballapura
ಮಗುವಿಗೆ ಬಲವಾಗಿ ಕೆನ್ನೆ ಕಚ್ಚಿದ ವ್ಯಕ್ತಿ

By

Published : Jan 12, 2020, 11:24 AM IST

ದೊಡ್ಡಬಳ್ಳಾಪುರ: ಸರಿಯಾಗಿ ಓದಲಿಲ್ಲ ಎನ್ನುವ ಕಾರಣಕ್ಕೆ ನಾಲ್ಕು ವರ್ಷದ ಹೆಣ್ಣು ಮಗುವಿನ ಕೆನ್ನೆಯನ್ನು ವ್ಯಕ್ತಿಯೊಬ್ಬ ಬಲವಾಗಿ ಕಚ್ಚಿ ಗಾಯಗೊಳಿಸಿದ ಘಟನೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.

ತಾಲೂಕಿನ ಎಳ್ಳುಪುರದ ನಾಗರಾಜ್ (30) ಕೃತ್ಯವೆಸಗಿದ ವ್ಯಕ್ತಿ. ಮಗುವಿನ ತಾಯಿ ಮತ್ತು ನಾಗರಾಜ್ ಕಳೆದ 20 ದಿನಗಳಿಂದ ಲಿವಿಂಗ್ ಟುಗೇದರ್​ನ​ಲ್ಲಿ ಇದ್ದರು. ಆಕೆಗೆ 6 ಮತ್ತು 4 ವರ್ಷದ ಇಬ್ಬರು ಹೆಣ್ಣು ಮಕ್ಕಳಿದ್ದರು. ಮಗು ಸರಿಯಾಗಿ ಓದಲಿಲ್ಲ ಅನ್ನುವ ಕಾರಣಕ್ಕೆ ನಾಗರಾಜ್​ ಮಗುವಿನ ಕೆನ್ನೆ ಕಚ್ಚಿ ಗಾಯಗೊಳಿಸಿದ್ದಾನೆ ಎಂದು ತಿಳಿದು ಬಂದಿದೆ.

ಇಷ್ಟೇ ಅಲ್ಲದೆ, ಆತ ಮಗುವಿಗೆ ದೈಹಿಕ ಹಿಂಸೆ ನೀಡಿದ್ದು ಮಗುವಿನ ಕಾಲುಗಳು ಊದಿಕೊಂಡಿವೆ. ಘಟನೆ ನಂತರ ಸ್ಥಳೀಯರು ನಾಗರಾಜ್​ಗೆ ಗೂಸಾ ಕೊಟ್ಟು ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದ್ದಾರೆ.

ABOUT THE AUTHOR

...view details