ನೆಲಮಂಗಲ: ಅಬಕಾರಿ ಇಲಾಖೆ ಅಧಿಕಾರಿಗಳು ತಾಲೂಕಿನ ಹಂಚೀಪುರ ಸಮೀಪ ವಾಹನಗಳ ತಪಾಸಣೆ ನಡೆಸುತ್ತಿರುವ ವೇಳೆ ಅಕ್ರಮವಾಗಿ ಗಾಂಜಾ ಸಾಗಾಟಕ್ಕೆ ಯತ್ನಿಸಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ವಾಹನ ತಪಾಸಣೆ ವೇಳೆ ಗಾಂಜಾ ಪತ್ತೆ: ವ್ಯಕ್ತಿಯ ಬಂಧನ - ನೆಲಮಂಗಲ ತಾಲೂಕಿನ ಹಂಚೀಪುರ ಘಟನೆ
ಅಕ್ರಮವಾಗಿ ಗಾಂಜಾ ಸಾಗಾಟಕ್ಕೆ ಯತ್ನಿಸಿದ್ದ ವ್ಯಕ್ತಿಯನ್ನು ಅಬಕಾರಿ ಇಲಾಖೆ ಅಧಿಕಾರಿಗಳು ನೆಲಮಂಗಲ ತಾಲೂಕಿನ ಹಂಚೀಪುರದಲ್ಲಿ ಬಂಧಿಸಿದ್ದಾರೆ.
Arrest
ಸೈಯದ್ ಮುನೀರ್ (40) ಬಂಧಿತ ವ್ಯಕ್ತಿ. ಈತನನ್ನು ಎನ್‍ಡಿಪಿಎಸ್ ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಇನ್ನು ಬಂಧಿತನಿಂದ 600 ಗ್ರಾಂ ಒಣ ಗಾಂಜಾ ಮತ್ತು ಗಾಂಜಾ ಸಾಗಿಸುತ್ತಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.