ಕರ್ನಾಟಕ

karnataka

By

Published : Mar 20, 2019, 10:14 AM IST

ETV Bharat / state

ಗುಂಪಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದ ಗಂಡು ಜಿಂಕೆ ಸಾವು

ಮೂರು ವರ್ಷದ ಗಂಡು ಜಿಂಕೆಯೊಂದು ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿರುವ ಬಳಗಾರನಹಳ್ಳಿಗೆ ಧಾವಿಸಿ ಬರುವಷ್ಟರಲ್ಲಿಯೇ ಗಾಭರಿಯಾಗಿ ಮುಖ ಹೊಡೆದುಕೊಂಡು ಚಿಕಿತ್ಸೆಗೂ ಮುನ್ನವೇ ಜೀವ ಬಿಟ್ಟಿದೆ.

ಗಂಡು ಜಿಂಕೆ ಸಾವು

ಬೆಂಗಳೂರು/ಆನೇಕಲ್ : ಇತ್ತೀಚೆಗೆ ತಮಿಳುನಾಡು-ಕರ್ನಾಟಕದ ಗಡಿ ಭಾಗದಲ್ಲಿ ಪ್ರಾಣಿಗಳು ನಾಡಿನತ್ತ ಆಗಮಿಸುವುದು ಸಾಮಾನ್ಯವಾಗುತ್ತಿದ್ದು, ನಿನ್ನೆಯಷ್ಟೇ ಮೂರು ವರ್ಷದ ಗಂಡು ಜಿಂಕೆಯೊಂದು ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿ ರಕ್ತಸಿಕ್ತವಾಗಿ ಸಾರ್ವಜನಿಕರಿಗೆ ಸಿಕ್ಕಿದೆ.

ಹೌದು, ತಮಿಳುನಾಡಿನ ಸಾಮಿನತ್ತ, ಕರ್ನಾಟಕದ ಬನ್ನೇರುಘಟ್ಟ ಅರಣ್ಯ, ಸರ್ಜಾಪುರ-ಬೇರಕಿ ಕಡೆಯ ಕಾಡುಗಳಲ್ಲಿನ ನವಿಲು, ಜಿಂಕೆ, ಆನೆ, ಕಾಡುಕೋಣ ಹೀಗೆ ಹತ್ತು ಹಲವಾರು ಜೀವಿಗಳು ಒಮ್ಮೆ ಒಂಟಿಯಾಗಿ-ಕೆಲವೊಮ್ಮೆ ಗುಂಪಾಗಿ ನಾಡಿಗೆ ಭೇಟಿ ನೀಡುತ್ತವೆ. ಇದೇ ರೀತಿ ಮೂರು ವರ್ಷದ ಗಂಡು ಜಿಂಕೆಯೊಂದು ಬೆಂಗಳೂರು-ಹೊಸೂರು ಹೆದ್ದಾರಿಯಲ್ಲಿರುವ ಬಳಗಾರನಹಳ್ಳಿಗೆ ಧಾವಿಸಿ ಬಂದಿದೆ. ಬರುವಷ್ಟರಲ್ಲಿಯೇ ಗಾಭರಿಯಾಗಿ ಮುಖ ಹೊಡೆದುಕೊಂಡು ರಕ್ತಸಿಕ್ತವಾಗಿ ಸಾರ್ವಜನಿಕರಿಗೆ ಸಿಕ್ಕಿದೆ.

ಇನ್ನೂ ಸಾರ್ವಜನಿಕರರು ಸಾಕಷ್ಟು ಸುಸ್ತಾಗಿ ಕಂಡ ಜಿಂಕೆಯನ್ನು ವನ್ಯಜೀವಿ ಸಂರಕ್ಷಕ ಅಧಿಕಾರಿಗಳಿಗೆ ಮಾಹಿತಿ ನೀಡಿ ಅತ್ತಿಬೆಲೆ ಪೊಲೀಸರ ನೆರವಿನಿಂದ ರಕ್ಷಿಸಿದ್ದಾರೆ. ನಂತರ ಜಿಂಕೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನಕ್ಕೆ ಕೊಂಡೋಯ್ದ ಅರಣ್ಯಾಧಿಕಾರಿಗಳು ಅಲ್ಲಿನ ವೈದ್ಯರಾದ ಡಾ. ಉಮಾಶಂಕರ್​ಗೆ ಒಪ್ಪಿಸಿದ್ದಾರೆ. ಆದರೆ ದಾರಿ ಮಧ್ಯೆಯೇ ಜಿಂಕೆ ಸಾವನ್ನಪ್ಪಿತ್ತು ಎಂಬುದು ನಂತರ ತಿಳಿದುಬಂದಿದ್ದು, ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿರುವುದಾಗಿ ವೈದ್ಯಾಧಿಕಾರಿ ತಿಳಿಸಿದ್ದಾರೆ.

ಅಲ್ಲದೇ, ಜಿಂಕೆಯು ಸರ್ಜಾಪುರದ ಸುತ್ತ ಎತೇಚ್ಛವಾಗಿರುವ ಜಿಂಕೆಗಳ ಗುಂಪಿನಿಂದ ತಪ್ಪಿಸಿಕೊಂಡು ನಾಡಿಗೆ ಬಂದಿದೆ. ಬರುವ ಹಾದಿಯಲ್ಲಿ ನಾಯಿಗಳು ಹೆದರಿಸಿ ಅಟ್ಟಾಡಿಸಿರುವುದರಿಂದ ಗಾಬರಿಯಲ್ಲೇ ಅಸು ನೀಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದುಬಂದಿದೆ.

ABOUT THE AUTHOR

...view details