ಕರ್ನಾಟಕ

karnataka

By

Published : Dec 24, 2022, 1:07 PM IST

ETV Bharat / state

ಜಾನುವಾರುಗಳ ಚರ್ಮಗಂಟು ರೋಗ ನಿವಾರಣೆಗಾಗಿ ದೇವರ ಮೊರೆ ಹೋದ ರೈತರು

ಜಾನುವಾರಿಗಳಿಗೆ ಕಾಡುತ್ತಿರುವ ಚರ್ಮಗಂಟು ರೋಗ ಆದಷ್ಟು ಬೇಗ ನಿವಾರಣೆಯಾಗುವಂತೆ ರೈತರು ಪ್ರಾರ್ಥನೆ ಸಲ್ಲಿಸಿದ್ದಾರೆ.

Lumpy skin disease Cattle
ವಿಶೇಷ ಪೂಜೆ

ದೊಡ್ಡಬಳ್ಳಾಪುರ(ಬೆಂ.ಗ್ರಾ): ತಾಲೂಕಿನಲ್ಲಿ ಚರ್ಮಗಂಟು ರೋಗದಿಂದ ಜಾನುವಾರುಗಳು ಬಳಲುತ್ತಿದ್ದು, ರೋಗ ನಿವಾರಣೆಗಾಗಿ ರೈತರು ದೇವರ ಮೊರೆ ಹೋಗಿದ್ದಾರೆ. ತಾಲೂಕಿನ ಗುಂಡುಮಗೆರೆ ಗ್ರಾಮದ ರೈತರು ದೇವರಿಗೆ ಬೇವಿನ ಸೊಪ್ಪು, ಹೋಳಿಗೆ, ಕಾಯಿ ಮತ್ತು ಹಣ್ಣು ಇಟ್ಟು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಜಾನುವಾರುಗಳಿಗೆ ಕಾಡುತ್ತಿರುವ ರೋಗ ಆದಷ್ಟು ಬೇಗ ನಿವಾರಣೆಯಾಗುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆ.

ಗ್ರಾಮದಲ್ಲಿ ದಶಕಗಳಿಂದ ಈ ಸಂಪ್ರದಾಯ ವಾಡಿಕೆಯಲ್ಲಿದೆ. ಇಲ್ಲಿನ ಜನ ಜಾನುವಾರುಗಳಿಗೆ ಏನಾದರೂ ರೋಗಗಳು ಬಂದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಎಡೆ ಇಟ್ಟು, ಊರಿನ ಹೊರಗೆ ಇಟ್ಟು ಬರುತ್ತಾರೆ. ಇದರಿಂದ ರೋಗ ನಮ್ಮ ಗ್ರಾಮದಿಂದ ಹೊರ ಹೋಗಲಿದೆ ಎನ್ನುವ ನಂಬಿಕೆ ಇವರದ್ದು.

ಇದನ್ನೂ ಓದಿ:ಸವದತ್ತಿ ಯಲ್ಲಮ್ಮ ದೇವಿ ದರ್ಶನ ಪಡೆದ ಸಿಎಂ ಬೊಮ್ಮಾಯಿ

ABOUT THE AUTHOR

...view details