ಕರ್ನಾಟಕ

karnataka

ETV Bharat / state

ಜಾನುವಾರುಗಳಿಗೆ ಚರ್ಮಗಂಟು ರೋಗ.. ನೆಲಮಂಗಲದ ಶಿವಗಂಗೆಯಲ್ಲಿ ದನಗಳ ಜಾತ್ರೆ ರದ್ದು - ಹೊನ್ನಾದೇವಿ ದೇವಾಲಯದ ಗಿರಿಜಾಕಲ್ಯಾಣ ಮಹೋತ್ಸವ

ಚರ್ಮಗಂಟು ರೋಗ ತಡೆಗೆ ಹಾಗೂ ಜಾನುವಾರು ಆರೋಗ್ಯದ ಹಿತದೃಷ್ಟಿಯಿಂದ ಶಿವಗಂಗೆಯಲ್ಲಿ ಜರುಗಬೇಕಿದ್ದ ದನಗಳ ಜಾತ್ರೆಯನ್ನು ರದ್ದುಗೊಳಿಸಲಾಗಿದೆ.

Sivaganga in Nelamangala Taluk
ನೆಲಮಂಗಲ ತಾಲೂಕಿನ ಶಿವಗಂಗೆ

By

Published : Dec 17, 2022, 1:50 PM IST

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿರುವ ಹಿನ್ನೆಲೆ ರೋಗ ತಡೆಗೆ ಹಾಗೂ ಜಾನುವಾರು ಆರೋಗ್ಯದ ಹಿತದೃಷ್ಟಿಯಿಂದ ಶಿವಗಂಗೆಯಲ್ಲಿ ಜರುಗಬೇಕಿದ್ದ ದನಗಳ ಜಾತ್ರೆಯನ್ನು ರದ್ದುಗೊಳಿಸಲಾಗಿದೆ.

2023 ರ ಜನವರಿ 30ರಂದು ಸಂಜೆ 6 ಗಂಟೆಯವರೆಗೂ ಜಿಲ್ಲೆಯಾದ್ಯಂತ ಜಾನುವಾರುಗಳ ಸಾಗಣೆ ಮತ್ತು ದನಗಳ ಜಾತ್ರೆ ಹಾಗೂ ಸಂತೆಯನ್ನ ನಿರ್ಬಂಧಿಸಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿ ಶ್ರೀ ಗಂಗಾಧರೇಶ್ವರ ಸ್ವಾಮಿ ಮತ್ತು ಹೊನ್ನಾದೇವಿ ದೇವಾಲಯದ ಗಿರಿಜಾಕಲ್ಯಾಣ ಮಹೋತ್ಸವದ ಪ್ರಯುಕ್ತ ಜರುಗುವ ದನಗಳ ಜಾತ್ರೆಯನ್ನು ರದ್ದುಪಡಿಸಲಾಗಿದೆ. ರೈತ ಬಾಂಧವರು ಸಹಕರಿಸಬೇಕೆಂದು ಎಂದು ಶಿವಗಂಗೆ ಶ್ರೀ ಗಂಗಾಧರೇಶ್ವರ ಮತ್ತು ಹೊನ್ನಾದೇವಿ ಸಮೂಹ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ರಾಸುಗಳಲ್ಲಿ ಚರ್ಮಗಂಟು ರೋಗ: ಅಗತ್ಯ ಮುನ್ನೆಚ್ಚರಿಕೆ ಕ್ರಮಕ್ಕೆ ಸೂಚನೆ

ABOUT THE AUTHOR

...view details