ಕರ್ನಾಟಕ

karnataka

ETV Bharat / state

ಪ್ರೇಮಿಗಳು ಆತ್ಮಹತ್ಯೆಗೆ ಶರಣು: ಬ್ಯಾಂಕ್​ನಲ್ಲಿ ಅರಳಿದ ಪ್ರೇಮ ರೆಸಾರ್ಟ್​ನಲ್ಲಿ ಅಂತ್ಯ! - undefined

ಧರ್ಮಪುರಿಯ ಆಕ್ಸಿಸ್ ಬ್ಯಾಂಕ್​ನಲ್ಲಿ ಕೆಲಸ ಮಾಡುತ್ತಿದ್ದವರ ನಡುವೆ ಪ್ರೇಮ ಚಿಗುರೊಡೆದು ಅದು ಫಲಿಸದೆ ಪ್ರೇಮಿಗಳಿಬ್ಬರು ಬೆಂಗಳೂರಿಗೆ ಬಂದು ಗೋಲ್ಡನ್ ಫಾರ್ಮ್ ರೆಸಾರ್ಟ್​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರೇಮಿಗಳು ಆತ್ಮಹತ್ಯೆಗೆ ಶರಣು

By

Published : Jul 4, 2019, 11:44 PM IST

ನೆಲಮಂಗಲ:ಒಂದೇ ಬ್ಯಾಂಕ್​​ನಲ್ಲಿ ಕೆಲಸ ಮಾಡುತ್ತಿದ್ದ ಅವರಿಬ್ಬರು ಒಂದಾಗಿ ಬದುಕುವ ಕನಸು ಕಂಡಿದ್ದರು. ಮದುವೆಗೆ ಹೆತ್ತವರ ವಿರೋಧದಿಂದ ಬೇಸತ್ತ ಪ್ರೇಮಿಗಳು ರೆಸಾರ್ಟ್​ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಾದನಾಯಕನಹಳ್ಳಿ ಪೊಲೀಸ್​ ಠಾಣೆ

ಬೆಂಗಳೂರು ನಗರ ಹೊರವಲಯದ ಮಾದನಾಯಕನಹಳ್ಳಿಯ ಗೋಲ್ಡನ್ ಫಾರ್ಮ್ ರೆಸಾರ್ಟ್​ನಲ್ಲಿ ಈ ಘಟನೆ ನಡೆದಿದೆ. ಈ ಪ್ರೇಮಿಗಳು ತಮಿಳುನಾಡಿನ ಧರ್ಮಪುರಿಯ ಮೂಲದವರು. ಮೃತರನ್ನು ಶ್ರೀನಿವಾಸ್ ( 37), ಸತ್ಯಜ್ಯೋತಿ (27) ಎಂದು ಗುರುತಿಸಲಾಗಿದೆ.

ಈ ಪ್ರೇಮಿಗಳು ಧರ್ಮಪುರಿಯ ಆಕ್ಸಿಸ್ ಬ್ಯಾಂಕ್​​ನಲ್ಲಿ ಕೆಲಸ ಮಾಡುತ್ತಿದ್ದರು. ಶ್ರೀನಿವಾಸ್ ಸೀನಿಯರ್ ಅಸಿಸ್ಟೆಂಟ್ ಮ್ಯಾನೆಜರ್ ಆಗಿ ಕೆಲಸ ಮಾಡುತ್ತಿದ್ದರು. ಅದೇ ಬ್ಯಾಂಕ್​​ನಲ್ಲಿ ಸತ್ಯಜ್ಯೋತಿ ಕ್ಯಾಶಿಯರ್ ಆಗಿದ್ದರು. ಒಂದೇ ಕಡೆ ಕೆಲಸ ಮಾಡುತ್ತಿದ್ದರಿಂದ ಸ್ನೇಹ ಪ್ರೀತಿಯಾಗಿ ಬದಲಾಗಿತ್ತು. ಕಳೆದ 10 ತಿಂಗಳಿಂದ ಇಬ್ಬರು ಪರಸ್ಪರ ಪ್ರೀತಿಸತೊಡಗಿದ್ದರು ಎನ್ನಲಾಗಿದೆ.

ಇದೇ ವೇಳೆ ಸತ್ಯಜ್ಯೋತಿಗೆ ಮದುವೆ ನಿಶ್ಚಿತಾರ್ಥ ನಿಶ್ಚಯವಾಗಿತ್ತು. ಈ ಹಿನ್ನೆಲೆ ಎರಡು ದಿನದ ಹಿಂದೆ ಮನೆ ಬಿಟ್ಟ ಪ್ರೇಮಿಗಳು ಧರ್ಮಪುರಿ ಎಸ್ಪಿ ಕಚೇರಿಗೆ ಭೇಟಿ ನೀಡಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದರು. ನಂತರ ಅಲ್ಲಿಂದ ಅವರಿಬ್ಬರು ಬೆಂಗಳೂರಿಗೆ ಬಂದಿದ್ದರು.

ನಿನ್ನೆ ಬೆಂ.ಉತ್ತರ ತಾಲೂಕು ನಗರೂರು ರಸ್ತೆಯ ಮಾದನಾಯಕನಹಳ್ಳಿಯಲ್ಲಿರುವ ಗೊಲ್ಡನ್ ಫಾರ್ಮ್​ ರೆಸಾರ್ಟ್​ನಲ್ಲಿ ತಂಗಿದ್ದರು. ರಾತ್ರಿ 9:30ಕ್ಕೆ ಚೆಕ್ ಇನ್ ಆದ ಜೋಡಿ ಬೆಳಿಗ್ಗೆಯಾದ್ರೂ ಹೊರಕ್ಕೆ ಬಂದಿರಲಿಲ್ಲ. ರೂಂ ಬಾಯ್ ಬಾಗಿಲು ತೆರದು ನೋಡಿದಾಗ ಅವರಿಬ್ಬರು ಆತ್ಮಹತ್ಯೆಗೆ ಶರಣಾಗಿರೋದು ಬೆಳಕಿಗೆ ಬಂದಿದೆ.

ಸ್ಥಳಕ್ಕೆ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಶ್ರೀನಿವಾಸ್​​ ಈ ಹಿಂದೆ ಮದುವೆಯಾಗಿದ್ದು, ಎರಡು ಮಕ್ಕಳಿರುವ ಮಾಹಿತಿ ಇದೆ. ಪ್ರೇಮಿಗಳ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

For All Latest Updates

TAGGED:

ABOUT THE AUTHOR

...view details