ನೆಲಮಂಗಲ: ದಕ್ಷಿಣ ಕಾಶಿ ಶಿವಗಂಗೆ ಬೆಟ್ಟಕ್ಕೆ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಲಾಕ್ಡೌನ್ನಿಂದಾಗಿ ಪ್ರವಾಸಿಗರು ಈ ಬೆಟ್ಟದ ಬಳಿ ಸುಳಿಯುತ್ತಿಲ್ಲ. ಹೀಗಾಗಿ ಪ್ರವಾಸಿಗರು ನೀಡುತ್ತಿದ್ದ ಆಹಾರವನ್ನೇ ನಂಬಿಕೊಂಡಿದ್ದ ಕೋತಿಗಳು ಈಗ ಹಸಿವಿನಿಂದ ನರಳುವಂತಾಗಿದ್ದು, ಇದನ್ನು ಗಮನಿಸಿದ ಸ್ಥಳೀಯರು ಆಹಾರವನ್ನು ಒದಗಿಸಿದ್ದಾರೆ.
ಶಿವಗಂಗೆ ಬೆಟ್ಟದಲ್ಲಿ ಸಾವಿರಾರು ಕೋತಿಗಳು ಆಶ್ರಯ ಪಡೆದಿವೆ. ಈ ಬೆಟ್ಟಕ್ಕೆ ಪ್ರವಾಸಿಗರು ಭೇಟಿ ನೀಡುತ್ತಿದ್ದ ಸಂದರ್ಭದಲ್ಲಿ ಇಲ್ಲಿರುವ ಕೋತಿಗಳು ಅವರಿಂದ ಆಹಾರವನ್ನು ಕಿತ್ತುಕೊಳ್ಳುತ್ತಿದ್ದವು. ಆದರೀಗ ಲಾಕ್ಡೌನ್ ಜಾರಿಯಾಗಿದ್ದು, ಕನಿಷ್ಠಪಕ್ಷ ದೇವಸ್ಥಾನದ ಆವರಣದಲ್ಲಿ ತೆರೆದಿರುತ್ತಿದ್ದ ಅಂಗಡಿಗಳೂ ಸಹ ಮುಚ್ಚಲ್ಪಟ್ಟಿವೆ. ಹೀಗಾಗಿ ಕೋತಿಗಳು ಹಸಿವಿನಿಂದ ಬಳಲುತ್ತಿವೆ.