ಕರ್ನಾಟಕ

karnataka

ETV Bharat / state

ಹಲಸು ಕೇಳುವವರೇ ಇಲ್ಲ:  ರೈತರು, ಮಾರಾಟಗಾರರ ಬದುಕು ಅತಂತ್ರ - ಹಣ್ಣಿನ ವ್ಯಾಪಾರ

ಲಾಕ್​ಡೌನ್ ಪರಿಣಾಮ​ ಎಲ್ಲ ಕ್ಷೇತ್ರಗಳಿಗೂ ವ್ಯಾಪಿಸಿದೆ. ಅದರಲ್ಲೂ ಕೃಷಿ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರಿದೆ. ಹಲಸು ಬೆಳೆಯುವ ರೈತರು ಹಾಗೂ ವ್ಯಾಪಾರಿಗಳ ಮೇಲೆ ಲಾಕ್​ಡೌನ್ ವ್ಯತಿರಿಕ್ತ ಪರಿಣಾಮ ಉಂಟಾಗಿದೆ.

jack fruits
ಹಲಸಿನ ಹಣ್ಣುಗಳು

By

Published : Jun 9, 2020, 7:39 AM IST

ಹೊಸಕೋಟೆ:ಹಲಸಿನ ಹಣ್ಣಿಗೆ ಬಹುದೊಡ್ಡ ಮಾರುಕಟ್ಟೆ ಇದ್ದರೂ ಲಾಕ್‌ಡೌನ್‌ನಿಂದಾಗಿ ವ್ಯಾಪಾರಿಗಳು ಹಳ್ಳಿಗಳತ್ತ ಮುಖ ಮಾಡದ ಪರಿಣಾಮ ಮರಗಳಲ್ಲೇ ಹಣ್ಣುಗಳು ಕೊಳೆಯುವ ಸ್ಥಿತಿಗೆ ತಲುಪಿದೆ. ಈ ಮೊದಲು ಇಟ್ಟಸಂದ್ರ, ಈಸೂರು, ಈ ಹೊಸಹಳ್ಳಿ, ರಾಮಗೋವಿಂದಪುರ, ಚೀಮಸಂದ್ರ, ಅನುಪಹಳ್ಳಿ ಸೇರಿ ಹಲವೆಡೆಯ ಹಲಸು ಕೊಳ್ಳಲು ವ್ಯಾಪಾರಿಗಳ ದಂಡು ರೈತರ ಮನೆ ಬಾಗಿಲಿಗೆ ಬರುತ್ತಿದ್ದರು. ಆದರೆ, ಲಾಕ್‌ಡೌನ್ ಪರಿಣಾಮ ಹಣ್ಣು ಖರೀದಿಸುವವರೇ ಇಲ್ಲದಂತಾಗಿದೆ.

ಹಲಸು ವ್ಯಾಪಾರಿಗಳು

ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕೋಲಾರ , ಚಿಕ್ಕಬಳ್ಳಾಪುರ ಮುಂತಾದ ಕಡೆಗಳಲ್ಲೂ ವ್ಯಾಪಾರ ಕುಸಿದಿದ್ದು, ಲೋಡ್​​ಗಟ್ಟಲೆ ಕಾಯಿಗಳು ಮಣ್ಣು ಪಾಲಾಗುತ್ತಿವೆ. ತಳ್ಳು ಗಾಡಿಗಳಲ್ಲಿ ನಗರದ ಓಣಿಗಳಲ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದವರೂ ಕೂಡಾ ಲಾಕ್‌ಡೌನ್‌ಗೆ ತುತ್ತಾಗಿ ಸಂಕಷ್ಟ ಎದುರಿಸುತ್ತಿದ್ದಾರೆ .

ಇನ್ನೂ ಕೆಲವರು ಹೊಸಕೋಟೆಯಿಂದ ಚಿಂತಾಮಣಿ, ಮದನಪಲ್ಲಿ, ಆಂಧ್ರಪ್ರದೇಶ ಕಡೆ ಹೋಗುವ ಮಾರ್ಗದ ರಸ್ತೆಯ ಬದಿಯಲ್ಲಿ ಹಲಸು ವ್ಯಾಪಾರ ಮಾಡುತ್ತಿದ್ದು, ಊರುಗಳಿಗೆ ಹೋಗುವವರು ಹಲಸಿನ ಹಣ್ಣನ್ನು ಕೊಂಡುಕೊಂಡು ಹೋಗುತ್ತಿದ್ದರು. ಆದರೆ, ಲಾಕ್​ಡೌನ್ ಬಂದ ಮೇಲೆ ಜನ ಯಾರು ಅಷ್ಟಾಗಿ ಹಲಸಿನ ಹಣ್ಣನ್ನು ಕೊಳ್ಳಲು ಬರುತ್ತಿಲ್ಲ ಇದರಿಂದ ಬೀದಿ ಬದಿಯ ವ್ಯಾಪಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾವಿರಾರು ರೂಪಾಯಿ ಬಂಡವಾಳ ಹೂಡಿ ಕೈ ಸುಟ್ಟು ಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ABOUT THE AUTHOR

...view details