ದೊಡ್ಡಬಳ್ಳಾಪುರ : ಆಯತಪ್ಪಿ ಬೈಕ್ ಸವಾರ ಕೆಳಗೆ ಬಿದ್ದಾಗ ಅದರಲ್ಲಿದ್ದ ಗೋಮಾಂಸ ರಸ್ತೆಯಲ್ಲಿ ಚೆಲ್ಲಿದೆ. ಗೋಮಾಂಸ ಕಂಡ ಸ್ಥಳೀಯರು ಬೈಕ್ಗೆ ಬೆಂಕಿ ಇಟ್ಟು ಸವಾರನನ್ನು ಪೊಲೀಸರ ವಶಕ್ಕೆ ನೀಡಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿಯಲ್ಲಿ ಕಳೆದ ರಾತ್ರಿ ಘಟನೆ ನಡೆದಿದೆ.
ಆಯತಪ್ಪಿ ಬೈಕ್ನಿಂದ ಬಿದ್ದ ಸವಾರ, ರಸ್ತೆಯಲ್ಲಿ ಚೆಲ್ಲಿದ ಮಾಂಸ: ಗೋಮಾಂಸ ಕಂಡು ಬೈಕ್ಗೆ ಬೆಂಕಿ ಇಟ್ಟ ಸ್ಥಳೀಯರು - ಬೈಕ್ ಸವಾರ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ
ಬೈಕ್ ಆಯತಪ್ಪಿ ಬಿದ್ದಾಗ ಅದರಲ್ಲಿ ಗೋಮಾಂಸ ಸಾಗಿಸುತ್ತಿರುವುದು ತಿಳಿದ ಸ್ಥಳಿಯರು ದ್ವಿಚಕ್ರ ವಾಹನಕ್ಕೆ ಬೆಂಕಿ ಇಟ್ಟ ಪ್ರಕರಣ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ಗೋಮಾಂಸ ಕಂಡು ಬೈಕ್ಗೆ ಬೆಂಕಿ ಇಟ್ಟ ಸ್ಥಳೀಯರು
ಹಿಂದೂಪುರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಬೈಕ್ ಸವಾರ ಆಯತಪ್ಪಿ ಕೆಳಗೆ ಬಿದ್ದಿದ್ದಾನೆ. ಬೈಕ್ನಲ್ಲಿ ಸಾಗಿಸುತ್ತಿದ್ದ ಗೋಮಾಂಸ ಸಹ ರಸ್ತೆಯಲ್ಲಿ ಚೆಲ್ಲಿದೆ, ಗೋಮಾಂಸ ಸಾಗಟ ಮಾಡುತ್ತಿದ್ದರಿಂದ ಅಕ್ರೋಶಗೊಂಡ ಸ್ಥಳೀಯರು ಬೈಕ್ಗೆ ಬೆಂಕಿ ಇಟ್ಟಿದ್ದಾರೆ. ನಂತರ ಬೈಕ್ ಸವಾರನನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೂ ಯಾವುದೇ ಪ್ರಕರಣ ದಾಖಲಾಗಿಲ್ಲ.
ಇದನ್ನೂ ಓದಿ :ಬೆಂಗಳೂರು: ಮಾದಕ ದಂಧೆಯಿಂದ ಕೋಟಿ ಕೋಟಿ ಗಳಿಸಿದವನ ಆಸ್ತಿ ಮುಟ್ಟುಗೋಲು