ETV Bharat Karnataka

ಕರ್ನಾಟಕ

karnataka

ETV Bharat / state

ನೆಲಮಂಗಲದಲ್ಲಿ ಚಿರತೆ ದಾಳಿಗೆ ವ್ಯಕ್ತಿ ಬಲಿ - ನೆಲಮಂಗಲ ಚಿರತೆ ದಾಳಿ ಸುದ್ದಿ

ತೋಟದಿಂದ ಹಸುಗಳನ್ನು ಹೊಡ್ಕೊಂಡ್ ಬರಲು ತೆರಳಿದ್ದ ವ್ಯಕ್ತಿಯನ್ನ ಚಿರತೆ ಕೊಂದು ಹಾಕಿರುವ ಘಟನೆ ನೆಲಮಂಗಲ ಸಮೀಪದ ಬೆಟ್ಟಹಳ್ಳಿ ಪಾಳ್ಯ ಗ್ರಾಮದಲ್ಲಿ ನಡೆದಿದೆ‌.

ಚಿರತೆ ದಾಳಿಗೆ ನೆಲಮಂಗಲದಲ್ಲಿ ವ್ಯಕ್ತಿ ಬಲಿ
author img

By

Published : Nov 6, 2019, 1:46 PM IST

ನೆಲಮಂಗಲ:ತೋಟದಿಂದ ಹಸುಗಳನ್ನು ಹೊಡ್ಕೊಂಡ್ ಬರಲು ತೆರಳಿದ್ದ ವ್ಯಕ್ತಿಯನ್ನ ಚಿರತೆ ಕೊಂದು ಹಾಕಿರುವ ಘಟನೆ ನೆಲಮಂಗಲ ಸಮೀಪದ ಬೆಟ್ಟಹಳ್ಳಿ ಪಾಳ್ಯ ಗ್ರಾಮದಲ್ಲಿ ನಡೆದಿದೆ‌.

ಚಿರತೆ ದಾಳಿಗೆ ನೆಲಮಂಗಲದಲ್ಲಿ ವ್ಯಕ್ತಿ ಬಲಿ

ರೈತ ಕೆಂಚಯ್ಯ ಎಂದಿನಂತೆ ಭಾನುವಾರ ತೋಟದಿಂದ ಹಸುಗಳನ್ನ ಹೊಡ್ಕೊಂಡ್ ಬರಲು ತೆರಳಿದ್ದ. ಆ ದಿನದಿಂದಲೇ ಕೆಂಚಯ್ಯ ನಾಪತ್ತೆಯಾಗಿದ್ದ. ಆತ ಎಲ್ಲಿದ್ದಾನೆ ಎಂಬ ಸುಳಿವೇ ಇರಲಿಲ್ಲ. ಇಂದು ರೈತ ಕೆಂಚಯ್ಯನ ಮೃತದೇಹ ಗುರುತು ಸಿಗದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಚಿರತೆ ದಾಳಿ ಮಾಡಿ ಕೆಂಚಯ್ಯನನ್ನು ಬಲಿ ಪಡೆದಿರುವ ಶಂಕೆ ವ್ಯಕ್ತವಾಗಿದೆ.

ಚಿರತೆ ಕೆಂಚಯ್ಯನ ದೇಹ, ಬಟ್ಟೆಗಳನ್ನು ಹರಿದು ಹಾಕಿದೆ. ಮೃತದೇಹ ಭಯಾನಕವಾಗಿದ್ದು, ಇನ್ನು ಚಿರತೆ ಇರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ಇದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಇದೀಗ ನೆಲಮಂಗಲ ಹಾಗೂ ಮಾಗಡಿ ವಲಯ ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ABOUT THE AUTHOR

...view details