ಕರ್ನಾಟಕ

karnataka

ETV Bharat / state

ಹೊಸಕೋಟೆ: ಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ ಭೂಮಿ ದಾನ ಮಾಡಿದ ಮುಸ್ಲಿಂ ವ್ಯಕ್ತಿ!

ಹೊಸಕೋಟೆ ಸಮೀಪದ ವಳಗೆರೆಪುರ-ಮೈಲಾಪುರ ಗೇಟ್‌ ಬಳಿ ಇರುವ ತಮ್ಮ 3 ಎಕರೆ ಭೂಮಿಯಲ್ಲಿ 1.5 ಗುಂಟೆ ಜಮೀನನ್ನು ಉಚಿತವಾಗಿ ಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ ದಾನ ಮಾಡಿದ್ದಾರೆ. ಜೊತೆಗೆ ಅವರ ಮಾಲೀಕತ್ವವನ್ನು ವೀರಾಂಜನೇಯ ಸ್ವಾಮಿ ದೇವಸ್ಥಾನದ ಸೇವಾ ಟ್ರಸ್ಟ್‌ಗೆ ವರ್ಗಾವಣೆ ಮಾಡುವುದಾಗಿ ತಿಳಿಸಿದ್ದಾರೆ.

land-donation-by-muslim-person-to-anjaneya-temple-news
ಸಮಾಜ ಸೇವಕ ಎಚ್‌ಎಂಜಿ ಬಾಷಾ

By

Published : Dec 8, 2020, 7:25 PM IST

ಹೊಸಕೋಟೆ:ಆಂಜನೇಯ ದೇವಾಲಯ ನಿರ್ಮಾಣಕ್ಕೆ ಮುಸ್ಲಿಂ ಸಮುದಾಯದ ವ್ಯಕ್ತಿಯೊಬ್ಬರು ಲಕ್ಷಾಂತರ ರೂ. ಬೆಲೆ ಬಾಳುವ ಭೂಮಿಯನ್ನು ದಾನ ಮಾಡಿದ್ದಾರೆ.

ಸಮಾಜ ಸೇವಕ ಹೆಚ್‌ಎಂಜಿ ಬಾಷಾ

ಇವತ್ತಿನ ಕಾಲದಲ್ಲಿ ಆಸ್ತಿ-ಜಮೀನಿಗಾಗಿ ಅಣ್ಣ-ತಮ್ಮಂದಿರೇ ಹೊಡೆದಾಡಿ ಕೋರ್ಟ್‌ ಮೆಟ್ಟಿಲೇರುತ್ತಾರೆ. ಆದರೆ ಇಲ್ಲೊಬ್ಬ ಮುಸ್ಲಿಂ ವ್ಯಕ್ತಿ, ಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ ಲಕ್ಷಾಂತರ ರೂ. ಬೆಲೆ ಬಾಳುವ ತಮ್ಮ 1.5 ಗುಂಟೆ ಭೂಮಿಯನ್ನು ಆಂಜನೇಯ ಸ್ವಾಮಿ ದೇವಸ್ಥಾನದ ಟ್ರಸ್ಟ್‌ಗೆ ಕೊಡುವ ಮೂಲಕ ಧರ್ಮ ಸಹಿಷ್ಣುತೆ ಮೆರೆದಿದ್ದಾರೆ.

ಬೆಂಗಳೂರಿನ ಕಾಡುಗೋಡಿಯ ಬೆಳತೂರು ಕಾಲೋನಿ ನಿವಾಸಿ, ಲಾರಿ ಉದ್ಯಮಿಯೂ ಆಗಿರುವ ಸಮಾಜ ಸೇವಕ ಹೆಚ್.‌ಎಂ.ಜಿ.ಬಾಷಾ, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಸಮೀಪದ ವಳಗೆರೆಪುರ-ಮೈಲಾಪುರ ಗೇಟ್‌ ಬಳಿರುವ ತಮ್ಮ 3 ಎಕರೆ ಭೂಮಿಯಲ್ಲಿ 1.5 ಗುಂಟೆ ಜಮೀನನ್ನು ಉಚಿತವಾಗಿ ಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ ದಾನ ಮಾಡಿದ್ದಾರೆ. ಜೊತೆಗೆ ಅವರ ಮಾಲೀಕತ್ವವನ್ನು ವೀರಾಂಜನೇಯ ಸ್ವಾಮಿ ದೇವಸ್ಥಾನದ ಸೇವಾ ಟ್ರಸ್ಟ್‌ಗೆ ವರ್ಗಾವಣೆ ಮಾಡುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ರೈತ, ಕನ್ನಡಪರ ಸಂಘಟನೆಗಳಿಂದ‌‌ ನಾಳೆ ವಿಧಾನಸೌಧ ಮುತ್ತಿಗೆ: ಸಾವಿರಕ್ಕೂ ಅಧಿಕ ಪೊಲೀಸರ ನಿಯೋಜನೆ

ಕಳೆದ ಮೂರು ದಶಕಗಳ ಹಿಂದೆ ಸಣ್ಣ ಗುಡಿಯಲ್ಲಿ ಆಂಜನೇಯ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿತ್ತು. ಈ ದೇವಾಲಯಕ್ಕೆ ಹೊಂದಿಕೊಂಡಂತೆ ಬಾಷಾ ಅವರ ಮೂರು ಎಕರೆ ಜಮೀನು ಇತ್ತು. ಇತ್ತೀಚೆಗೆ ದೇವಾಲಯಕ್ಕೆ ಕಟ್ಟಡ ನಿರ್ಮಾಣ ಮಾಡುವ ಕಾರ್ಯವನ್ನು ಗ್ರಾಮಸ್ಥರು ಕೈಗೆತ್ತಿಕೊಳ್ಳುವ ಆಲೋಚನೆ ನಡೆಸಿದ್ದರು. ಈ ಸಂದರ್ಭದಲ್ಲಿ ವಿಶಾಲವಾಗಿ ದೇವಾಲಯ ನಿರ್ಮಿಸುವಂತೆ ಸ್ವತಃ ಬಾಷಾ ಅವರು 1.5 ಗುಂಟೆ ಜಾಗವನ್ನು ಗ್ರಾಮದ ಹಿಂದೂಗಳಿಗೆ ಹಸ್ತಾಂತರಿಸಿದ್ದಾರೆ.

ಧನಸಹಾಯ:

ಕಳೆದ ಎಂಟು ತಿಂಗಳಿನಿಂದ ದೇವಾಲಯದ ಕಟ್ಟಡ ಜೀರ್ಣೋದ್ಧಾರ ಕಾಮಗಾರಿ ನಡೆಯುತ್ತಿದ್ದು, ಬಾಷಾ ಅವರು ಭೂಮಿ ಮಾತ್ರವಲ್ಲದೆ ಧನಸಹಾಯ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಆಂಜನೇಯ ಗುಡಿ ಚಿಕ್ಕದಾಗಿದ್ದ ಹಿನ್ನೆಲೆ ಸುತ್ತಲೂ ಪ್ರದಕ್ಷಿಣೆ ಹಾಕಲು ಆಗುತ್ತಿರಲಿಲ್ಲ. ಆದರೆ ಈಗ ಅವರು ಭೂಮಿ ದಾನ ಮಾಡಿರುವುದು ಸಂತೋಷ ತಂದಿದೆ. ಅಲ್ಲದೆ ತಮ್ಮ ಜಾಗದಲ್ಲಿ ಹಿಂದೂ ಧರ್ಮದ ದೇವರು ಇದೆ ಎಂದು ಗೊತ್ತಿದ್ದರೂ ಸಹ ಬಾಷಾ ಕುಟುಂಬಸ್ಥರು ಇದುವರೆಗೂ ಯಾವುದೇ ತೊಂದರೆ ಕೊಡದೆ ಪೂಜಾ ಕಾರ್ಯಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details