ಕರ್ನಾಟಕ

karnataka

ETV Bharat / state

ಒತ್ತುವರಿ ತೆರವು ವಿಚಾರ: ತಹಶೀಲ್ದಾರ್​ಗೆ ನಿಂದಿಸಿದ ವಕೀಲೆ ವಿರುದ್ಧ ದೂರು - Lady lawyer allegedly insulted tehsildar

ನೆಲಮಂಗಲ ತಹಶೀಲ್ದಾರ್​ಗೆ ನಿಂದಿಸಿರುವ ಆರೋಪದ ಮೇಲೆ ಮಹಿಳಾ ವಕೀಲರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

The lawyer insulted the Tehsildar
ತಹಶೀಲ್ದಾರ್​ಗೆ ನಿಂದಿಸಿದ ವಕೀಲೆ

By

Published : Oct 9, 2022, 8:19 PM IST

ನೆಲಮಂಗಲ:ಇಲ್ಲಿನ ಗುಂಡು ತೋಪು ಒತ್ತುವರಿ ತೆರವು ಮಾಡುವ ವೇಳೆ ನೆಲಮಂಗಲ ತಹಶೀಲ್ದಾರ್ ಕೆ. ಮಂಜುನಾಥ್ ಅವರಿಗೆ ವಕೀಲೆಯೊಬ್ಬರು ಏಕವಚನದಲ್ಲಿ ನಿಂದಿಸಿರುವ ಆರೋಪದ ಮೇಲೆ ದಾಬಸ್​​ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ನೆಲಮಂಗಲ ತಾಲೂಕಿನ ದಾಬಸ್​​ಪೇಟೆ ಪಟ್ಟಣದ ಸರ್ವೆ ನಂಬರ್ 91ರ 17 ಗುಂಟೆಯಲ್ಲಿ 2.8 ಗುಂಟೆ ಜಾಗವನ್ನು ವಸೀಂ ಅಕ್ರಂ ಎಂಬುವರು ಒತ್ತುವರಿ ಮಾಡಿಕೊಂಡಿದ್ದರು. ಒತ್ತುವರಿ ತೆರವು ಮಾಡಲು ಒಂದು ವಾರದ ಹಿಂದೆಯಷ್ಟೇ ವಸೀಂ ಅಕ್ರಂ ಅವರಿಗೆ ನೋಟಿಸ್ ನೀಡಲಾಗಿತ್ತು. ಇಂದು ಒತ್ತುವರಿಯಾದ ಜಾಗವನ್ನು ವಶಪಡಿಸಿಕೊಂಡು ಸೋಂಪುರ ಗ್ರಾಮ ಪಂಚಾಯತಿಗೆ ಹಸ್ತಾಂತರಿಸಲು ತಾಲೂಕು ಆಡಳಿತ ಮುಂದಾಗಿತ್ತು.

ತಹಶೀಲ್ದಾರ್​ಗೆ ನಿಂದಿಸಿದ ವಕೀಲೆ

ಈ ವೇಳೆ ವಸೀಂ ಪರ ವಕೀಲೆ ಆಸ್ಮಾ ಎಂಬುವರು ತಮಗೆ ಎಕವಚನದಲ್ಲಿ ನಿಂದಿಸಿದ್ದಾರೆ. ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ ಏಕವಚನದಲ್ಲಿ ನಿಂದನೆ ಮಾಡಿದ್ದಾರೆ ಎಂದು ದಾಬಸ್ ಪೇಟೆ ಪೋಲಿಸ್ ಠಾಣೆಯಲ್ಲಿ ತಹಶೀಲ್ದಾರ್ ಕೆ ಮಂಜುನಾಥ್ ದೂರು ದಾಖಲು ಮಾಡಿದ್ದಾರೆ.

ಅಲ್ಲದೆ, ಸುದ್ದಿ ಮಾಡಲು ತೆರಳಿದ ಪತ್ರಕರ್ತರಿಗೂ ವಸೀಂ ಅಕ್ರಂ ಬೆದರಿಕೆ ಹಾಕಿದ್ದಾರೆ ಎಂದು ದಾಬಸ್​​ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಇದನ್ನೂ ಓದಿ:ಮಾಹಿತಿ ಕೇಳಿದ ವಿಶೇಷಚೇತನನಿಗೆ ಒದ್ದ ಸರಪಂಚ್​.. ದರ್ಪ ತೋರಿ ಸ್ಥಾನ ಕಳೆದುಕೊಂಡ ದುರಹಂಕಾರಿ

ABOUT THE AUTHOR

...view details