ಕರ್ನಾಟಕ

karnataka

ETV Bharat / state

ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳ ಬಸ್ ಪಾಸ್​ ಅವಧಿ ವಿಸ್ತರಣೆ.. ನಮಗೂ ಮಾಡಿ ಎಂದ ಇತರ ಸ್ಟುಡೆಂಟ್ಸ್​ - ರಿಯಾಯಿತಿ ಬಸ್​ಪಾಸ್ ಸೌಲಭ್ಯ

ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಿರುವಂತೆ ಇತರ ಸೆಮಿಸ್ಟರ್ ವಿದ್ಯಾರ್ಥಿಗಳಿಗೂ ಕೆಎಸ್​ಆರ್​ಟಿಸಿ ಬಸ್ ಪಾಸ್ ಅವಧಿ ವಿಸ್ತರಿಸುವಂತೆ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.

kn_bng_04_buspass_avb_KA10057
ಬಸ್ ಪಾಸ್​ ಅವಧಿ ವಿಸ್ತರಣೆ

By

Published : Sep 1, 2022, 10:16 PM IST

ದೊಡ್ಡಬಳ್ಳಾಪುರ:ಕೆಎಸ್​ಆರ್​ಟಿಸಿಯಿಂದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ರಿಯಾಯಿತಿ ಬಸ್​ಪಾಸ್ ಸೌಲಭ್ಯ ನಿನ್ನೆಮುಕ್ತಾಯಗೊಂಡಿದ್ದು ಪದವಿ, ಸ್ನಾತಕೋತ್ತರ, ಡಿಪ್ಲೊಮಾ ವಿದ್ಯಾರ್ಥಿಗಳ ಬಸ್​ಪಾಸ್ ಅವಧಿಯನ್ನು ಎರಡು ತಿಂಗಳು ಕಾಲ ವಿಸ್ತರಣೆ ಮಾಡುವಂತೆ ಒತ್ತಾಯಿಸಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ರಿಯಾಯಿತಿ ಬಸ್​ಪಾಸ್ ಸೌಲಭ್ಯ ಆಗಸ್ಟ್​ 31ಕ್ಕೆ ಮುಕ್ತಾಯವಾಗಿದ್ದು, ಸೇವಾಸಿಂಧು ಪೋರ್ಟಲ್​ನಲ್ಲಿ ಅರ್ಜಿ ಸಲ್ಲಿಸಿ ಹೊಸ ಬಸ್ ಪಾಸ್ ಪಡೆಯುವಂತೆ ಸಾರಿಗೆ ಸಂಸ್ಥೆ ಅಧಿಸೂಚನೆ ಹೊರಡಿಸಿತ್ತು. ಇನ್ನೂ ಅಂತಿಮ ಸೆಮಿಸ್ಟರ್​ ಪರೀಕ್ಷೆಗಳು ನಡೆಯುತ್ತಿರುವ ಕಾರಣಕ್ಕೆ ಅಂತಿಮ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಎರಡು ತಿಂಗಳ ಕಾಲ ಬಸ್ ಪಾಸ್ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. 2 ಮತ್ತು 4ನೇ ಸೆಮಿಸ್ಟರ್ ವಿದ್ಯಾರ್ಥಿಗಳು ತಮಗೂ ಬಸ್ ಪಾಸ್ ಅವಧಿ ವಿಸ್ತರಣೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ಬಸ್ ಪಾಸ್​ಗಾಗಿ ಅನ್​ಲೈನ್ ನಲ್ಲಿ ಅರ್ಜಿ ಹಾಕಲು ಹೋದರೆ ಸೇವಾಸಿಂಧು ಪೋರ್ಟಲ್​ನಲ್ಲಿ ಅರ್ಜಿ ತೆಗೆದುಕೊಳ್ಳುತ್ತಿಲ್ಲ. ಕಾಲೇಜ್ ಹೋಗಲು ಹಣ ಕೊಟ್ಟು ಟಿಕೆಟ್ ಖರೀದಿ ಮಾಡಿ ಪ್ರಯಾಣಿಸಬೇಕಿದೆ, ಬಡ ವಿದ್ಯಾರ್ಥಿಗಳು ನಿತ್ಯ ಪ್ರಯಾಣಕ್ಕೆ 200ರೂಪಾಯಿ ಖರ್ಚು ಮಾಡಲು ಕಷ್ಟವಾಗುತ್ತಿದೆ ಇದರಿಂದ 2 ತಿಂಗಳ ಕಾಲ ಬಸ್​ ಪಾಸ್​ ಅವಧಿ ವಿಸ್ತರಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ:ಗೌರಿ ಗಣೇಶ ಹಬ್ಬಕ್ಕೆ ಕೆಎಸ್‌ಆರ್‌ಟಿಸಿ ಟಿಕೆಟ್​ ದರದಲ್ಲಿ ರಿಯಾಯಿತಿ: 500 ಹೆಚ್ಚುವರಿ ಬಸ್ ನಿಯೋಜನೆ

ABOUT THE AUTHOR

...view details