ದೇವನಹಳ್ಳಿ: ಇಡಿ ವಿಚಾರಣೆಗೆ ತೆರಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ದೆಹಲಿಯಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬುಧವಾರ ಮಧ್ಯಾಹ್ನ 12 ಗಂಟೆಗೆ ಆಗಮಿಸಿದ್ದ ಡಿಕೆ ಶಿವಕುಮಾರ್ ಅವರು, ಇಡಿ ವಿಚಾರಣೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದರು. ಈಗ ಕಂಪ್ಲೀಟ್ ವಿಚಾರಣೆ ನಡೆದಿದ್ದು, ನ್ಯಾಷನಲ್ ಹೆರಾಲ್ಡ್, ಎಂಗ್ ಇಂಡಿಯಾ ಸಂಸ್ಥೆ ಸಂಬಂಧ ವಿಚಾರಣೆಯೂ ಸಹ ಕಂಪ್ಲೀಟ್ ಆಗಿದೆ ಎಂದು ತಿಳಿಸಿದರು.
ಇಡಿ ವಿಚಾರಣೆ ಮುಗಿಸಿ ಡಿಕೆ ಶಿವಕುಮಾರ್ ಬೆಂಗಳೂರಿಗೆ ವಾಪಸ್.. ಈಶ್ವರಪ್ಪಗೆ ಟಾಂಗ್
ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಮಾತನಾಡಿದ ಡಿಕೆ ಶಿವಕುಮಾರ್, ಹಣ ಎಣಿಸುವ ಪ್ರಿಂಟ್ ಮಷಿನ್ ಅನ್ನು ಈಶ್ವರಪ್ಪನ ಮನೆಯಿಂದ ಬಾಡಿಗೆಗೆ ತಂದಿದ್ದೇವೆ ಎಂದು ಟಾಂಗ್ ನೀಡಿದರು.
ಡಿ.ಕೆ.ಶಿವಕುಮಾರ್
23 ಮತ್ತು 19 ರಂದು ಮತ್ತೆ ಕೇಸ್ ಇದೆ. ಎಕನಾಮಿಕ್ ಅಫೆನ್ಸ್ ಕೋರ್ಟ್ ಮತ್ತು ಬೇರೆ ಬೇರೆ ರಾಜಕೀಯ ಹೋರಾಟಗಳದ್ದು ಮತ್ತೆ 19 ಕ್ಕೆ ಕೇಸ್ ಇದೆ . ಜತೆಗೆ 23 ಕ್ಕೆ ಮತ್ತೆ ದೆಹಲಿಯಲ್ಲಿ ಕೇಸ್ ಇದ್ದು ಮತ್ತೆ ಹೋಗುತ್ತೇನೆ ಎಂದು ಹೇಳಿದರು. ಈಶ್ವರಪ್ಪ ಹೇಳಿಕೆ ವಿಚಾರಕ್ಕೆ ಮಾತನಾಡಿದ ಡಿಕೆ, ದುಡ್ಡನ್ನ ಎಣಿಸಲು ಪ್ರಿಂಟ್ ಮಷಿನ್ ಅನ್ನು ಈಶ್ವರಪ್ಪ ಮನೆಯಿಂದ ಬಾಡಿಗೆಗೆ ತಂದು ಎಣಿಸುತ್ತಿದ್ದೇವೆ ಎಂದು ಈ ವೇಳೆ ಟಾಂಗ್ ನೀಡಿದರು.
ಇದನ್ನೂ ಓದಿ:'ಕಾಂಗ್ರೆಸ್ಗೆ ಮತ ನೀಡಿದ್ರೆ ವ್ಯರ್ಥ...': ಗುಜರಾತ್ನಲ್ಲಿ ಸರ್ಕಾರ ರಚಿಸುವ ಭರವಸೆಯಲ್ಲಿ ಕೇಜ್ರಿವಾಲ್
Last Updated : Nov 16, 2022, 3:55 PM IST