ಆನೇಕಲ್ : ದೇಶದಲ್ಲಿ ಚುಟುಕು ಕ್ರಿಕೆಟ್ ಎಂದ ಖ್ಯಾತಿ ಪಡೆದಿರುವ ಐಪಿಲ್ ಅನ್ನು ಕೆಲವರು ತಮ್ಮ ಬೆಟ್ಟಿಂಗ್ ದಂಧೆಗೆ ಬಳಸಿಕೊಳ್ಳುತ್ತಿದ್ದಾರೆ.
ಐಪಿಎಲ್ ಬೆಟ್ಟಿಂಗ್ ದಂಧೆ : ಆರೋಪಿ ಸೆರೆ ಹಿಡಿದ ಪೊಲೀಸರು - kannadanews
ಐಪಿಲ್ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು,ಬಂಧಿತನಿಂದ ಮೊಬೈಲ್, ಹಾಗೂ 65 ಸಾವಿರ ರೂ. ವಶಪಡಿಸಿಕೊಂಡಿದ್ದಾರೆ.
![ಐಪಿಎಲ್ ಬೆಟ್ಟಿಂಗ್ ದಂಧೆ : ಆರೋಪಿ ಸೆರೆ ಹಿಡಿದ ಪೊಲೀಸರು](https://etvbharatimages.akamaized.net/etvbharat/prod-images/768-512-3252629-thumbnail-3x2-momorjpeg.jpg)
ಐಪಿಎಲ್ ಬೆಟ್ಟಿಂಗ್ ದಂಧೆ
ಹೀಗಾಗಿ ಈ ಬೆಟ್ಟಿಂಗ್ ದಂಧೆ ತಡೆಗಟ್ಟಲು ಅತ್ತಿಬೆಲೆ ಪೊಲೀಸರು ಮುಂದಾಗಿದ್ದು, ಈ ಸಂಬಂಧ ಓರ್ವ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಭರತ್ (38) ಬಂಧಿತ ಆರೋಪಿಯಾಗಿದ್ದು, ಆತನಿಂದ ಬೆಟ್ಟಿಂಗ್ ಬಗ್ಗೆ ಗೀಚಿದ್ದ ಹಾಳೆ, ನೋಟ್ ಬುಕ್ ಮತ್ತು ಅರವತ್ತೈದು ಸಾವಿರ ನಗದು ವಶಪಡಿಸಿಕೊಂಡು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಐಪಿಎಲ್ ಬೆಟ್ಟಿಂಗ್ ದಂಧೆ
ಐಪಿಲ್ ಬೆಟ್ಟಿಂಗ್ ದಂಧೆ ಜಾಡು ಬೆನ್ನತ್ತಿರುವ ಪೊಲೀಸರು ಆರೋಪಿ ಭರತ್ ನನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.