ಬೆಂಗಳೂರು : ಕೇಂದ್ರ ಸರ್ಕಾರದಿಂದ ಆಚರಿಸಲ್ಪಡುವ ಹಿಂದಿ ದಿವಸ್ ದಿನಕ್ಕೆ ಪರ್ಯಾಯವಾಗಿ ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ, ಕನ್ನಡವೇ ರಾಷ್ಟ್ರೀಯ ಭಾಷೆ ಎಂದು ಕನ್ನಡಿಗರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ನಡೆಸಿದರು.
ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ; ಹಿಂದಿ ನಾಮಫಲಕ ಕಿತ್ತೆಸೆದ ವೀರ ಕನ್ನಡಿಗರು!! - ಹಿಂದಿ ನಾಮಫಲಕ ಕಿತ್ತು ಬಿಸಾಕಿದ ಸಂಘಟನೆಗಳು ಸುದ್ದಿ
ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮುಂಭಾಗದಲ್ಲಿರುವ ನಿಲ್ದಾಣದ ಫಲಕದಲ್ಲಿದ್ದ ಹಿಂದಿ ಅಕ್ಷರಗಳನ್ನು ಧ್ವಂಸ ಮಾಡಿದರು. ಧಿಕ್ಕಾರ, ಧಿಕ್ಕಾರ ಹಿಂದಿ ಹೇರಿಕೆಗೆ ಧಿಕ್ಕಾರ, ಮೊಳಗಲಿ ಮೊಳಗಲಿ ಕನ್ನಡ ಭಾಷೆ ಮೊಳಗಲಿ ಎಂದು ಘೋಷಣೆ ಕೂಗಿದರು..
ಅದರ ಭಾಗವಾಗಿ ಕನ್ನಡ ಪರ ಸಂಘಟನೆಗಳ ಮುಖಂಡರು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದ ಮುಂಭಾಗದಲ್ಲಿರುವ ನಿಲ್ದಾಣದ ಫಲಕದಲ್ಲಿದ್ದ ಹಿಂದಿ ಅಕ್ಷರಗಳನ್ನು ಧ್ವಂಸ ಮಾಡಿದರು. ಧಿಕ್ಕಾರ, ಧಿಕ್ಕಾರ ಹಿಂದಿ ಹೇರಿಕೆಗೆ ಧಿಕ್ಕಾರ, ಮೊಳಗಲಿ ಮೊಳಗಲಿ ಕನ್ನಡ ಭಾಷೆ ಮೊಳಗಲಿ ಎಂದು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಭಾರತದ ಭಾಷಾನೀತಿ ಮರು ಪರಿಶೀಲಿಸಲು ಕ್ರಮಕೈಗೊಳ್ಳಬೇಕು ಹಾಗೂ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು 8ನೇ ಪರಿಚ್ಛೇದದಲ್ಲಿರುವ ಎಲ್ಲಾ ಇಪ್ಪತ್ತೆರಡು ಭಾಷೆಗಳನ್ನೂ ಆಡಳಿತ ಭಾಷೆಗಳನ್ನಾಗಿ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರದ ಮೌರ್ಯ ಸರ್ಕಲ್‌ನಲ್ಲಿ ಪ್ರತಿಭಟನಾ ಧರಣಿ ನಡೆಸಲಾಯಿತು.