ಆನೇಕಲ್(ಬೆಂ.ಗ್ರಾಮಾಂತರ):ಮರಾಠ ಅಭಿವೃದ್ದಿ ಪ್ರಾಧಿಕಾರ ರಚನೆ ವಿರೋಧಿಸಿ ಅತ್ತಿಬೆಲೆ ಗಡಿಯಲ್ಲಿ ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ಮುಂದುವರೆಸಿದ್ದಾರೆ.
ಬೊಮ್ಮಸಂದ್ರ ಹೆದ್ದಾರಿಯಲ್ಲಿ ನಾರಾಯಣಗೌಡ ಬಣದ ಗಜೇಂದ್ರ ನೇತೃತ್ವದಲ್ಲಿ ಕಾರ್ಯಕರ್ತರು ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಹೊಸೂರು ಮುಖ್ಯರಸ್ತೆಯ ಚಂದಾಪುರದ ಶನಿವಾರ ಸಂತೆಗೆ ಬೆಳಗ್ಗೆ ಬಂದ್ ಬಿಸಿ ತಟ್ಟಲಿಲ್ಲ. ಹೀಗಾಗಿ ಜನರು ವ್ಯಾಪಾರದಲ್ಲಿ ನಿರತರಾಗಿದ್ದು ಕಂಡುಬಂತು. ಬಳಿಕ ಚಂದಾಪುರ ಬಿಎಂಟಿಸಿ ನಿಲ್ದಾಣದ ಬಳಿ ಆಗಮಿಸಿದ ಕಾರ್ಯಕರ್ತರು, ರೂಟ್ ನಂಬರ್ 600ರ ಬಸ್ ಮೇಲೆ ಕಲ್ಲು ತೂರಿದರು. ಇದರಿಂದಾಗಿ ಬಸ್ನ ಹಿಂಬದಿಯ ಗಾಜು ಹಾಗೂ ಸೈಡ್ ಮಿರರ್ ಪುಡಿ-ಪುಡಿಯಾಗಿದೆ.