ಕರ್ನಾಟಕ

karnataka

ETV Bharat / state

ಲಾಠಿ ಬಿಟ್ಟು ಮೈಕ್​ ಹಿಡಿದ ಟ್ರಾಫಿಕ್​ ಪೊಲೀಸರು

ಜನರ ಓಡಾಟ ನಿಲ್ಲಿಸಲು ಪೊಲೀಸರು ಲಾಠಿ ಬೀಸಿದ್ದೂ ಆಯಿತು. ನಾಕಾಬಂದಿ ಮಾಡಿ ನಿಯಂತ್ರಿಸಿದ್ದೂ ಆಯಿತು. ಕೆಲವು ಅಧಿಕಾರಿಗಳು ಕೈ ಮುಗಿದಿದ್ದೂ ಆಯಿತು. ಈಗ ಒಂದು ಹೆಜ್ಜೆ ಮುಂದೆ ಹೋಗಿ ಕೆ.ಆರ್.ಪುರ ಟ್ರಾಫಿಕ್ ಪೊಲೀಸರು ಹಾಡು ಹಾಡುವ ಮುಖಾಂತರ ಕೊರೊನಾ ಬಗ್ಗೆ ಜಾಗೃತಿ ಮೂಡಿಸಲು ಹೊರಟಿದ್ದಾರೆ.

Traffic police
ಟ್ರಾಫಿಕ್​ ಪೊಲೀಸರು

By

Published : Apr 6, 2020, 3:28 PM IST

ಬೆಂಗಳೂರು ಗ್ರಾಮಾಂತರ: ಕೆ.ಆರ್.ಪುರ ಟ್ರಾಫಿಕ್​ ಪೊಲೀಸರು ಕೊರೊನಾ ವಿರುದ್ಧ ಹೋರಾಡಿ ಎಂದು ರಸ್ತೆಯಲ್ಲಿ ನಿಂತು ಹಾಡು ಹಾಡುವ ಮೂಲಕ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ.

ಹಾಡಿನ ಮೂಲಕ ಜಾಗೃತಿ ಮೂಡಿಸುತ್ತಿರುವ ಟ್ರಾಫಿಕ್​ ಪೊಲೀಸರು

ಕೆ.ಆರ್.ಪುರ ಇನ್ಸ್‌ಪೆಕ್ಟರ್ ಲೋಕೆಶ್ ಹಾಗೂ ಹೆಡ್ ಕಾನ್ಸ್​ಟೇಬಲ್​ ನಾರಾಯಣ ಸ್ವಾಮಿಯವರ ತಂಡ ಕೊರೊನಾದಿಂದ ಜೀವ ರಕ್ಷಿಸಿಕೊಳ್ಳುವಂತೆ ಗಾಯನದ ಮೂಲಕ ಅರಿವು ಮೂಡಿಸಲು ಮುಂದಾಗಿದ್ದಾರೆ.

ಶಿವರಾಜ್​ ಕುಮಾರ್ ಅಭಿನಯದ ಜೋಗಿ ಸಿನಿಮಾದ ಬೇಡುವೆನು ವರವನ್ನು ಹಾಗೂ ಡಾ. ರಾಜ್ ಕುಮಾರ್ ಅವರ ಅಭಿನಯದ ಶೃತಿ ಸೇರಿದಾಗ ಸಿನಿಮಾದ ನಗಲಾರದೆ ಅಳಲಾರದೆ ಹಾಡಿಗೆ ತಾವೇ ಸಾಹಿತ್ಯ ಬರೆದು ಲಾಕ್ ಡೌನ್ ಕಾನೂನನ್ನು ಪಾಲಿಸಿ, ಆರೋಗ್ಯ ಕಾಪಾಡಿಕೊಳ್ಳಿ. ಕರೋನಾ ವಿರುದ್ಧ ಹೋರಾಡಿ ಎಂದು ಜಾಗೃತಿ ಮೂಡಿಸಿದ್ದಾರೆ.

ಪೊಲೀಸರು ಕೇವಲ ದರ್ಪದಿಂದ ವರ್ತಿಸುತ್ತಾರೆ ಎನ್ನುವ ವಾಡಿಕೆಯ ಮಾತಿನ ಮಧ್ಯೆ ಕೆಲವು ಪೊಲೀಸ್ ಅಧಿಕಾರಿಗಳು ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಿಂದ ಮಾದರಿಯಾಗಿದ್ದಾರೆ.

ABOUT THE AUTHOR

...view details