ದೊಡ್ಡಬಳ್ಳಾಪುರ: ಕೊರೊನಾ ಸೋಂಕಿಗೆ ತಾಲೂಕಿನ ಪತ್ರಕರ್ತರೊಬ್ಬರು ಬಲಿಯಾಗಿದ್ದು, ಜೀವನದ ಕೊನೆ ಕ್ಷಣದಲ್ಲಿ ಸೋಂಕಿನ ಕುರಿತು ಜಾಗೃತಿ ಮೂಡಿಸಿದ ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕೊನೆ ಕ್ಷಣದಲ್ಲೂ ಕೊರೊನಾ ಜಾಗೃತಿ ಮೂಡಿಸಿ ವಿದಾಯ ಹೇಳಿದ ಪತ್ರಕರ್ತ: ವಿಡಿಯೋ ವೈರಲ್ - Journalist death
ಕೊರೊನಾ ಸೋಂಕಿನಿಂದ ದೊಡ್ಡಬಳ್ಳಾಪುರದ ಪತ್ರಕರ್ತರೊಬ್ಬರು ಮೃತಪಟ್ಟಿದ್ದು, ಜೀವ ಹೋಗುತ್ತಿರುವ ಕೊನೆ ಗಳಿಗೆಯಲ್ಲೂ ಸೋಂಕಿನ ಗಂಭೀರತೆಯ ಕುರಿತು ಅವರು ಮಾಡಿರುವ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಸುದ್ದಿ ಮಾಡುತ್ತಿದೆ.
ಕೊರೊನಾ ಸೋಂಕಿಗೆ ತುತ್ತಾಗಿದ್ದ ಪತ್ರಕರ್ತ ಕಳೆದ ಒಂದು ವಾರದಿಂದ ದೇವನಹಳ್ಳಿಯ ಆಕಾಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.
ಸಾಯುವುದಕ್ಕೂ ಒಂದು ದಿನ ಮುಂಚೆ ಪತ್ರಕರ್ತ ಐಸಿಯುನಿಂದಲೇ ಕೊರೊನಾ ಸೋಂಕಿನ ಗಂಭೀರತೆಯ ಜಾಗೃತಿ ವಿಡಿಯೋ ಒಂದನ್ನು ಮಾಡಿ ಹರಿಬಿಟ್ಟಿದ್ದರು. ಕೊರೊನಾ ಕಾರಣದಿಂದ ಕುಟುಂಬದೊಂದಿಗೆ ಸಂಪರ್ಕ ಕಳೆದುಕೊಂಡ ಬಗ್ಗೆ ವಿಡಿಯೋದಲ್ಲಿ ನೋವು ತೋಡಿಕೊಂಡಿದ್ದರು. ಇದೀಗ ಅವರ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.