ನೆಲಮಂಗಲ :ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗಾಗಿ ಪ್ರತಿಯೊಬ್ಬ ಕನ್ನಡಿಗರು ತಮ್ಮ ಅಳಿಲು ಸೇವೆ ಮಾಡುತ್ತಿದ್ದಾರೆ. ಹಾಗೆಯೇ ಜೋಮೋಟೋ ಖಾಸಗಿ ಕಂಪನಿ ಸಿಬ್ಬಂದಿ 75 ಸಾವಿರ ಮೌಲ್ಯದ ಆಹಾರ ಮತ್ತು ಔಷಧಿ ಸಾಮಗ್ರಿ ಸಂಗ್ರಹಿಸಿ ತಹಸೀಲ್ದಾರ್ ಕಚೇರಿಗೆ ಹಸ್ತಾಂತರಿಸಿದ್ದಾರೆ.
ಸಂತ್ರಸ್ಥರ ನೆರವಿಗೆ ನಿಂತ ಜೋಮೋಟೋ ಡೆಲಿವರಿ ಬಾಯ್ಸ್ - ತಹಶೀಲ್ದಾರ್ ಕಚೇರಿ
ಉತ್ತರ ಕರ್ನಾಟಕ ನೆರೆ ಸಂತ್ರಸ್ತರಿಗಾಗಿ ಎಲೆಕ್ಟ್ರಾನಿಕ್ ಸಿಟಿಯ ಜೋಮೋಟೋ ಖಾಸಗಿ ಕಂಪನಿಯ ಡೆಲವರಿ ಬಾಯ್ಸ್ ಸುಮಾರು 75 ಸಾವಿರ ರೂ. ಮೌಲ್ಯದ ಅಗತ್ಯ ಸಾಮಾಗ್ರಿಗಳನ್ನು ಸಂಗ್ರಹಿಸಿ ಉಪ ತಹಸೀಲ್ದಾರ ರಮೇಶ್ ಅವರಿಗೆ ಹಸ್ತಾಂತರಿಸಿದ್ದಾರೆ.
ಜೋಮೋಟೋ
ಎಲೆಕ್ಟ್ರಾನಿಕ್ ಸಿಟಿಯ ಜೋಮೋಟೋ ಖಾಸಗಿ ಕಂಪನಿಯ ಡೆಲವರಿ ಬಾಯ್ಸ್ ಸಹ ಸುಮಾರು 75 ಸಾವಿರ ಮೌಲ್ಯದ ಆಹಾರ ಮತ್ತು ಅಗತ್ಯ ಸಾಮಗ್ರಿ ಸೇರಿದಂತೆ, ಔಷಧಿಗಳನ್ನು ನೆಲಮಂಗಲ ತಾಲೂಕು ಕಚೇರಿಯ ಉಪ ತಹಸೀಲ್ದಾರ ರಮೇಶ್ ರಿಗೆ ಹಸ್ತಾಂತರಿಸಿ, ತಮ್ಮ ಮಾನವೀಯತೆಯನ್ನು ಮೆರೆದಿದ್ದಾರೆ. ಇನ್ನೂ ಕಾರ್ಮಿಕರ ಈ ಕಾರ್ಯಕ್ಕೆ ಸ್ಥಳೀಯರು ಸಾಥ್ ನೀಡಿದ್ದಾರೆ. ಅಲ್ಲದೇ ಯುವಕರ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು.