ಕರ್ನಾಟಕ

karnataka

ETV Bharat / state

ಮಲೇಷ್ಯಾದಿಂದ ವಾಪಸಾದ ಜೆಡಿಎಸ್ ಶಾಸಕರು: ಪಕ್ಷ ಬಿಡುವ ವದಂತಿಗಳಿಗೆ ತೆರೆ

ಮಲೇಷ್ಯಾಗೆ ತೆರಳಿದ್ದ ಜೆಡಿಎಸ್ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಬೆಂಗಳೂರಿಗೆ ವಾಪಸಾಗಿದ್ದಾರೆ. ಈ ವೇಳೆ ಜೆಡಿಎಸ್​ ತೊರೆಯುತ್ತಾರೆ ಎಂಬ ವದಂತಿಗಳಿಗೆ ಅವರೇ ತೆರೆ ಎಳೆದಿದ್ದಾರೆ. ನಾವು ರಿಲ್ಯಾಕ್ಸ್​ಗಾಗಿ ಮಲೇಷ್ಯಾಕ್ಕೆ ತೆರಳಿದ್ದೆವು, ಯಾವುದೇ ಕಾರಣಕ್ಕೂ ಜೆಡಿಎಸ್​ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಮಲೇಷ್ಯಾದಿಂದ ಬೆಂಗಳೂರಿಗೆ ವಾಪಸ್ಸಾದ ಜೆಡಿಎಸ್ ಶಾಸಕರು

By

Published : Sep 4, 2019, 6:46 PM IST

ಬೆಂಗಳೂರು: ಮಲೇಷ್ಯಾಗೆ ತೆರಳಿದ್ದ ಜೆಡಿಎಸ್ ಶಾಸಕರು ಮತ್ತು ಪರಿಷತ್ ಸದಸ್ಯರು ಬೆಂಗಳೂರಿಗೆ ಹಿಂದಿರುಗಿದ್ದಾರೆ.

ಶಾಸಕ ಗುಬ್ಬಿ ಶ್ರೀನಿವಾಸ್, ಪರಿಷತ್ ಸದಸ್ಯ ಕಾಂತರಾಜ್, ಚೌಡರೆಡ್ಡಿ ಹಾಗೂ ಸುರೇಂದ್ರಬಾಬು, ಮಾಜಿ ಶಾಸಕ ಸುರೇಶ್ ಬಾಬು ಕಳೆದ ಐದು ದಿನಗಳ ಹಿಂದೆ ಮಲೇಷ್ಯಾಕ್ಕೆ ತೆರಳಿದ್ದರು. ಇದರಿಂದ ಜೆಡಿಎಸ್ ಶಾಸಕರು ಬಿಜೆಪಿಗೆ ಸೇರುತ್ತಾರೆ ಎನ್ನುವ ಸುದ್ದಿ ಕೇಳಿ ಬಂದಿತ್ತು. ಆದರೆ ಇಂದು ನಗರಕ್ಕೆ ಆಗಮಿಸಿದ ಶಾಸಕರು ಎಲ್ಲಾ ವದಂತಿಗಳಿಗೆ ತೆರೆ ಎಳೆದಿದ್ದಾರೆ.

ಮಲೇಷ್ಯಾದಿಂದ ಬೆಂಗಳೂರಿಗೆ ಹಿಂದಿರುಗಿದ ಜೆಡಿಎಸ್ ಶಾಸಕರು

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾಜಿ ಸಚಿವ ಹಾಗೂ ಶಾಸಕ ಶ್ರೀನಿವಾಸ್ ಮಾತನಾಡಿ, ನಾವು ಯಾವ ಪಕ್ಷಕ್ಕೂ ಹೋಗೋದಿಲ್ಲ. ಜೆಡಿಎಸ್ ತೊರೆಯುತ್ತೇವೆ ಅನ್ನೋದೆಲ್ಲಾ ಗಾಳಿ ಸುದ್ದಿ. ಮೂರು ತಿಂಗಳ ಹಿಂದೆಯೇ ಮಲೇಷ್ಯಾಗೆ ಹೋಗುವ ಪ್ಲಾನ್ ಆಗಿತ್ತು. ರಿಲ್ಯಾಕ್ಸ್ ಪಡೆಯಲು ಅಲ್ಲಿಗೆ ಹೋಗಿದ್ದೆವು ಎಂದು ಸ್ಪಷ್ಟಪಡಿಸಿದರು.

ಎಂಎಲ್​ಸಿ ಚೌಡರೆಡ್ಡಿ ಮಾತನಾಡಿ, ನಮಗೆ ಪಕ್ಷ ಬಿಡುವ ಯಾವುದೇ ಆಲೋಚನೆ ಇಲ್ಲ. ಹಬ್ಬಿರುವ ವದಂತಿ ತಪ್ಪು. ನಾಳೆಯೇ ನಾನು ಜೆಡಿಎಸ್ ವರಿಷ್ಠರನ್ನ ಭೇಟಿ ಮಾಡ್ತೇನೆ ಎಂದು ಹೇಳಿದ್ರು.

ABOUT THE AUTHOR

...view details