ನೆಲಮಂಗಲ:ದುಡಿಯುವ ಜನತೆಯ ಧ್ವನಿಯಾಗಿ ಅಖಿಲ ಭಾರತ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಕರೆ ನೀಡಿದ್ದು, ದಾಬಸ್ಪೇಟೆಯ ಸಿಐಟಿಯು ಸಂಘಟನೆ ನಿವಾರ್ ಚಂಡಮಾರುತದ ನಡುವೆಯೂ ಮುಷ್ಕರಕ್ಕೆ ಬೆಂಬಲ ನೀಡಿ ಶಾಂತಿಯುತ ಜಾಥಾ ನಡೆಸಿತು.
ನಿವಾರ್ ಚಂಡಮಾರುತದ ನಡುವೆಯೂ ಅಖಿಲ ಭಾರತ ಮುಷ್ಕರಕ್ಕೆ ಬೆಂಬಲ - ಅಖಿಲ ಭಾರತ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಬೆಂಬಲ
ದಾಬಸ್ಪೇಟೆಯ ಉದ್ದಾನೇಶ್ವರ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ಹೊರಟ ಸಿಐಟಿಯು ಸಂಘಟನೆ, ಕೈಗಾರಿಕಾ ಪ್ರದೇಶದಲ್ಲಿ ಜಾಥಾ ನಡೆಸಿತು.
ದಾಬಸ್ಪೇಟೆಯ ಉದ್ದಾನೇಶ್ವರ ವೃತ್ತದಲ್ಲಿ ಬಹಿರಂಗ ಸಭೆ ನಡೆಸಿ ಹೊರಟ ಸಿಐಟಿಯು ಸಂಘಟನೆ, ಕೈಗಾರಿಕಾ ಪ್ರದೇಶದಲ್ಲಿ ಜಾಥಾ ನಡೆಸಿತು. ಮುಷ್ಕರ ಹಿನ್ನಲೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ನೆಲಮಂಗಲ ತಾಲೂಕಿನ ಅತಿದೊಡ್ಡ ಕೈಗಾರಿಕಾ ಪ್ರದೇಶವಾಗಿರುವ ದಾಬಸ್ಪೇಟೆ 5 ಕೈಗಾರಿಕಾ ವಲಯ ಹೊಂದಿದೆ. ಲಕ್ಷಾಂತರ ಕಾರ್ಮಿಕರು ದುಡಿಯುತ್ತಿದ್ದಾರೆ. ಕೊರೊನಾ ಬಂದ ನಂತರ ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಸಂಕಷ್ಟದಲ್ಲಿರುವ ಕಾರ್ಮಿಕರ ಹಿತ ಕಾಯಬೇಕಾದ ಕೇಂದ್ರ ಸರ್ಕಾರ ಇದೀಗ ಮತ್ತಷ್ಟು ಸಂಕಷ್ಟಕ್ಕೆ ಗುರಿ ಮಾಡಿದೆ. ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ಕೇಂದ್ರ ಸರ್ಕಾರದ ಧೋರಣೆ ವಿರುದ್ಧ ಕಾರ್ಮಿಕರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಮಿಕರನ್ನು ಗುಲಾಮರಾಗಿಸುವ ಕಾರ್ಮಿಕ ನೀತಿಗಳನ್ನು ಹಿಂಪಡೆಯಿರಿ. ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಿರಿ. ಆದಾಯ ತೆರಿಗೆ ರಹಿತ ಕುಟುಂಬಗಳಿಗೆ 7500 ರೂ. ಪಾವತಿಸಿ, ಎಲ್ಲಾ ಅಗತ್ಯ ಇರುವರಿಗೆ ತಿಂಗಳಿಗೆ 10 ಕೆಜಿ ಉಚಿತ ಪಡಿತರ ವಿತರಿಸಿ. ಸಾರ್ವಜನಿಕ ವಲಯ ಸೇವಾ ಸಂಸ್ಥೆಗಳ ಖಾಸಗೀಕರಣ ನಿಲ್ಲಿಸಿ ಎಂದು ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರ ನಡೆಸಿದರು.