ಕರ್ನಾಟಕ

karnataka

ಜೇಮ್ಸ್ ಚಿತ್ರ ಪೈರಸಿ : ಲಿಂಕ್ ಡಿಲೀಟ್ ಮಾಡುವಂತೆ ಅಪ್ಪು ಅಭಿಮಾನಿಗಳ ಪ್ರತಿಭಟನೆ

By

Published : Mar 19, 2022, 9:32 PM IST

ಡಾ. ಪುನೀತ್ ರಾಜ್​​ಕುಮಾರ್ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆ ಆಗಿ ಮೂರು ದಿನವೂ ಸಹ ಕಳೆದಿಲ್ಲ, ಅದಾಗಲೇ ಕೆಲ ಕಿಡಿಗೇಡಿಗಳು ಚಿತ್ರವನ್ನು ಪೈರಸಿ ಮಾಡಿದ್ದಾರೆ. ಇದನ್ನು ಖಂಡಿಸಿ ಅಪ್ಪು ಅಭಿಮಾನಿಗಳು ದೊಡ್ಡಬಳ್ಳಾಪುರದಲ್ಲಿ ಪ್ರತಿಭಟನೆ ಮಾಡಿದರು.

ಅಪ್ಪು ಅಭಿಮಾನಿಗಳ ಪ್ರತಿಭಟನೆ
ಅಪ್ಪು ಅಭಿಮಾನಿಗಳ ಪ್ರತಿಭಟನೆ

ದೊಡ್ಡಬಳ್ಳಾಪುರ : ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ಬಿಡುಗಡೆಗಾಗಿ ಮೂರು ದಿನವಾಗಿಲ್ಲ, ಅದಾಗಲೇ ಸಿನಿಮಾ ಪೈರಸಿ ಆಗಿದೆ. ಪೈರಸಿ ಲಿಂಕ್ ಡಿಲೀಟ್ ಮಾಡುವಂತೆ ಒತ್ತಾಯಿಸಿ ಥಿಯೇಟರ್ ಮುಂದೆ ಕರ್ನಾಟಕ ರಾಜರತ್ನ ಪುನೀತ್ ರಾಜ್​​​ ಕುಮಾರ್ ಸೇವಾ ಟ್ರಸ್ಟ್ ನ ಸದಸ್ಯರು ಪ್ರತಿಭಟನೆ ನಡೆಸಿದರು.

ಅಪ್ಪು ಅಭಿಮಾನಿಗಳ ಪ್ರತಿಭಟನೆ

ನಗರದ ವೈಭವ ಥಿಯೇಟರ್ ಮುಂದೆ ಪ್ರತಿಭಟನೆ ನಡೆಸಿದ ಕರ್ನಾಟಕ ರಾಜರತ್ನ ಪುನೀತ್ ರಾಜ್​​ಕುಮಾರ್ ಸೇವಾ ಟ್ರಸ್ಟ್ ನ ಸದಸ್ಯರು, ಡಾ. ಪುನೀತ್ ರಾಜ್​​ಕುಮಾರ್ ಕೊನೆಯ ಚಿತ್ರ ಜೇಮ್ಸ್ ಬಿಡುಗಡೆ ಆಗಿ ಮೂರು ದಿನವೂ ಸಹ ಕಳೆದಿಲ್ಲ, ಅದಾಗಲೇ ಕೆಲ ಕಿಡಿಗೇಡಿಗಳು ಚಿತ್ರವನ್ನು ಪೈರಸಿ ಮಾಡಿದ್ದಾರೆ. ಪೈರಸಿ ವಿಡಿಯೋ ಕುರಿತಾಗಿ ಮಾಹಿತಿಯನ್ನು ಕಲೆ ಹಾಕಿದ್ದೇವೆ. ಕೂಡಲೇ ಸರ್ಕಾರ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಸಂಘದ ಕಾರ್ಯದರ್ಶಿ ಅರ್ಜುನ್ ವೈ ಎನ್, ಪೈರಸಿ ಮಾಡಿದ ಕಿಡಿಗೇಡಿಗಳಿಗೆ ಎಚ್ಚರಿಕೆ ನೀಡಿದ್ದೇವೆ. ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಲಿಂಕ್​​​​ಗಳನ್ನ ಡಿಲೀಟ್ ಮಾಡಿಸಬೇಕೆಂದು ಮನವಿ ಮಾಡಿದರು.

For All Latest Updates

ABOUT THE AUTHOR

...view details