ಬೆಂಗಳೂರು: ಶಾಸಕ ಜಮೀರ್ ಅಹಮದ್ ಖಾನ್ ಅವರು ಸ್ವಾಮೀಜಿಯೊಬ್ಬರ ಎಂಜಲು ಸೇವಿಸುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಬಿ ಆರ್ ಅಂಬೇಡ್ಕರ್ ಜಯಂತಿ ಮತ್ತು ಈದ್ ಮಿಲನ್ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಉತ್ತರಪ್ರದೇಶದಲ್ಲಿ ದಲಿತರಿಗೆ ದೇವಾಲಯ ಪ್ರವೇಶ ನಿರಾಕರಿಸಿರುವ ಹಾಗೂ ಊಟ ಹಾಕದೆ ಅವಮಾನಿಸಿರುವ ಘಟನೆಯನ್ನು ಖಂಡಿಸಿದ ಜಮೀರ್ ಅಹಮದ್ ದಲಿತ ಮಠದ ಮಠಾಧೀಶರಾದ ಶ್ರೀ ನಾರಾಯಣ ಸ್ವಾಮೀಜಿ ಅವರ ಎಂಜಲು ಸೇವಿಸುವ ಮೂಲಕ ಉತ್ತರ ಪ್ರದೇಶ ಘಟನೆಯನ್ನು ವಿರೋಧಿಸಿದ್ದಾರೆ.
ಸರ್ವ ಧರ್ಮೀಯರು ಹಾಗೂ ಸರ್ವ ಜಾತಿಯ ಜನರನ್ನು ಒಂದೇ ರೀತಿ ಕಾಣುವ ಕಾರ್ಯ ಆಗಬೇಕು. ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಕಂಡ ಕನಸು ನನಸಾಗಬೇಕು. ಎಲ್ಲ ಜಾತಿ ಹಾಗೂ ಧರ್ಮದವರನ್ನು ಸಮಾನವಾಗಿ ಕಂಡಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ದಲಿತ ಸ್ವಾಮೀಜಿ ಎಂಜಲು ಸೇವಿಸುವ ಮೂಲಕ ಕಾಂಗ್ರೆಸ್ ಜಾತ್ಯತೀತ ಪಕ್ಷ. ಎಲ್ಲ ಧರ್ಮಿಯರನ್ನು ಸಮಾನವಾಗಿ ಕಾಣುತ್ತದೆ ಎಂಬ ಸಂದೇಶ ಸಾರುವ ಪ್ರಯತ್ನವನ್ನು ಜಮೀರ್ ಮಾಡಿದ್ದು, ಇದಕ್ಕೆ ಬಿಜೆಪಿ ನಾಯಕರು ಮುಂದಿನ ದಿನಗಳಲ್ಲಿ ಯಾವ ರೀತಿ ಪ್ರತಿಕ್ರಿಯೆ ನೀಡಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ. ಇದೇ ಸಂದರ್ಭದಲ್ಲಿ ಬಿಬಿಎಂಪಿಯ ಪೌರ ಕಾರ್ಮಿಕರಿಗೆ ಇಂದು ಶಾಸಕ ಜಮೀರ್ ಅಹ್ಮದ್ ಖಾನ್ ಆಹಾರ ಪೊಟ್ಟಣಗಳನ್ನು ಹಂಚಿದರು.