ದೊಡ್ಡಬಳ್ಳಾಪುರ:ನಗರದ ಸೋಮೇಶ್ವರ ಬಡಾವಣೆಯಲ್ಲಿರುವ ಜಾಲಪ್ಪ ಪುತ್ರ ರಾಜೇಂದ್ರ ಮನೆಯ ಮೇಲೆ ಐಟಿ ಅಧಿಕಾರಿಗಳು ಏಕಾ-ಏಕಿ ದಾಳಿ ನಡೆಸಿದ್ದಾರೆ.
ಮಾಜಿ ಕೇಂದ್ರ ಸಚಿವ ಜಾಲಪ್ಪ ಮಗನ ಮನೆ ಮೇಲೆಯೂ ಐಟಿ ದಾಳಿ - ಆರ್ಎಲ್ ಜಾಲಪ್ಪ ಆಸ್ಪತ್ರೆ ಮೇಲೆ ಐಟಿ ದಾಳಿ
ಲೋಕಸಭೆಯ ಸದಸ್ಯರು ಮತ್ತು ಕೇಂದ್ರ ಸರ್ಕಾರದ ಮಾಜಿ ಮಂತ್ರಿಗಳಾಗಿದ್ದ ಆರ್.ಎಲ್.ಜಾಲಪ್ಪ ಮಗನ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಐಟಿ ದಾಳಿ
ಇಂದು ಬೆಳಿಗ್ಗೆ ಕೋಲಾರದಲ್ಲಿ ಆರ್ಎಲ್ ಜಾಲಪ್ಪ ಆಸ್ಪತ್ರೆ ಮೇಲೆ ಐಟಿ ದಾಳಿ ನಡೆದಿತ್ತು. ತದನಂತರ ಜಾಲಪ್ಪರ ಮೂರನೇ ಮಗ ಜೆ ರಾಜೇಂದ್ರ ಕುಮಾರ್ ಮನೆ ಮೇಲೂ ಐಟಿ ದಾಳಿ ನಡೆಸಿದೆ. ಸದ್ಯ ದೊಡ್ಡಬಳ್ಳಾಪುರ ನಗರದ ಸೋಮೇಶ್ಚರ ಬಡಾವಣೆಯಲ್ಲಿರುವ ಮನೆಯಲ್ಲಿ ಐದು ಜನ ಐಟಿ ಅಧಿಕಾರಿಗಳಿಂದ ಪರಿಶೀಲನೆ ನಡೆಯುತ್ತಿದೆ.
ಜೆ ರಾಜೇಂದ್ರ ಕುಮಾರ್ ಕೋಲಾರದ ಟಮಕ ದೇವರಾಜ್ ಅರಸ್ ಮೆಡಿಕಲ್ ಕಾಲೇಜಿನ ನಿರ್ದೇಶಕರು ಸಹ ಆಗಿದ್ದರು.
Last Updated : Oct 10, 2019, 1:04 PM IST