ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದಲ್ಲಿ ಟೆಕ್ನಿಷಿಯನ್ ಬಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಇಸ್ರೋದ ಮುಖ್ಯ ಕಚೇರಿಯಿರುವ ಬೆಂಗಳೂರು, ನಾಗ್ಪುರ, ಕೋಲ್ಕತ್ತಾ, ಜೋಧಪುರ ಮತ್ತು ನವದೆಹಲಿಯ ಐದು ಪ್ರಾದೇಶಿಕ ಕಚೇರಿಯಲ್ಲಿ ಈ ನೇಮಕಾತಿ ನಡೆಯಲಿದೆ. ಒಟ್ಟು 54 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ಹುದ್ದೆಯಲ್ಲಿ ಆಸಕ್ತಿ ಹೊಂದಿರುವವರು ಅರ್ಜಿ ಸಲ್ಲಿಸಬಹುದಾಗಿದ್ದು, ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ಇಸ್ರೋದಲ್ಲಿ ಅರ್ಜಿ ಆಹ್ವಾನಿಸಲಾಗಿರುವ 54 ಹುದ್ದೆಗಳ ಮಾಹಿತಿ ಹೀಗಿದೆ.
- ಟೆಕ್ನಿಷಿಯನ್ ಬಿ (ಎಲೆಕ್ಟ್ರಾನಿಕ್ ಮೆಕಾನಿಕ್) - 33 ಹುದ್ದೆಗಳು
- ಟೆಕ್ನಿಷಿಯನ್ ಬಿ (ಎಲೆಕ್ಟ್ರಿಕಲ್) - 8 ಹುದ್ದೆಗಳು
- ಟೆಕ್ನಿಷಿಯನ್ ಬಿ (ಇನ್ಸ್ಟ್ರುಮೆಂಟ ಮೆಕಾನಿಕ್ ) - 9 ಹುದ್ದೆಗಳು
- ಟೆಕ್ನಿಷಿಯನ್ ಬಿ (ಫೋಟೋಗ್ರಫಿ) - 2 ಹುದ್ದೆಗಳು
ವಿದ್ಯಾರ್ಹತೆ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅಧಿಕೃತ ಮಂಡಳಿಗಳಿಂದ 10ನೇ ತರಗತಿ, ಐಟಿಐ, ಎನ್ಟಿಸಿ, ಎನ್ಎಸಿ ಉತ್ತೀರ್ಣತೆ ಹೊಂದಿರಬೇಕು.
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 18 ರಿಂದ ಗರಿಷ್ಠ 35 ವರ್ಷ ವಯೋಮಿತಿಯನ್ನು ಹೊಂದಿರಬೇಕು. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.