ದೊಡ್ಡಬಳ್ಳಾಪುರ (ಬೆಂ.ಗ್ರಾ): ನಗರದಲ್ಲಿ ಕೇವಲ 30 ದಿನಗಳ ಒಳಗೆ ಮೇಕ್ಶಿಫ್ಟ್(ತಾತ್ಕಾಲಿಕ) ಆಸ್ಪತ್ರೆ ತಲೆಎತ್ತಿದ್ದು, ಹಲವು ವಿಶೇಷತೆಗಳನ್ನು ಈ ಆಸ್ಪತ್ರೆ ಹೊಂದಿದೆ. ರಾಜ್ಯದಲ್ಲಿ ಪ್ರಥಮ ಮತ್ತು ದೇಶದಲ್ಲಿ ಅತಿ ವೇಗವಾಗಿ ನಿರ್ಮಾಣವಾದ ಆಸ್ಪತ್ರೆ ಇದಾಗಿದ್ದು, ಸರ್ಕಾರದ ಅನುದಾನ ಬಯಸದೆ ಆಸ್ಪತ್ರೆ ನಿರ್ಮಾಣದ ಸಂಪೂರ್ಣ ವೆಚ್ಚವನ್ನ ಖಾಸಗಿ ಸಂಸ್ಥೆಗಳ ಸಿಎಸ್ಆರ್ ಫಂಡ್ನಲ್ಲಿ ನಿರ್ಮಾಣ ಮಾಡಲಾಗಿದೆ.
ತಿಂಗಳೊಳಗೆ ನಿರ್ಮಾಣಗೊಂಡಿತು ದೇಶದ ‘ಫಾಸ್ಟೆಸ್ಟ್ ಮೇಕ್ ಶಿಫ್ಟ್’ ಆಸ್ಪತ್ರೆ ಏನಿದು ಮೇಕ್ ಶಿಫ್ಟ್ ಆಸ್ಪತ್ರೆ?
ಈ ಮೇಕ್ ಶಿಫ್ಟ್ ಆಸ್ಪತ್ರೆಯನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಬಹಳ ಸುಲಭವಾಗಿ ಸ್ಥಳಾಂತರ ಮಾಡಬಹುದಾಗಿದೆ. ಕೊರೊನಾ ಸೋಂಕಿತರ ಸಂಖ್ಯೆ ಒಂದು ಪ್ರದೇಶದಲ್ಲಿ ಹೆಚ್ಚು ಉಲ್ಬಣಗೊಂಡು, ಮತ್ತೊಂದು ಪ್ರದೇಶದಲ್ಲಿ ಇಳಿಮುಖವಾದಾಗ, ಕೋವಿಡ್ ಉಲ್ಬಣಗೊಂಡ ಪ್ರದೇಶಕ್ಕೆ ಸ್ಥಳಾಂತರ ಮಾಡ ಬಹುದು, ತಾತ್ಕಾಲಿಕ ಆಸ್ಪತ್ರೆಯಾಗಿದ್ರು ಇದು 25 ವರ್ಷಗಳ ವರೆಗೆ ಬಳಸಬಹುದಾಗಿದೆ.
ಜಿಲ್ಲಾಧಿಕಾರಿಗಳ ಶ್ರಮದಿಂದ ಮೇಕ್ ಶಿಫ್ಟ್ ಆಸ್ಪತ್ರೆ
ಈಗಾಗಲೇ ಮೇಕ್ ಶಿಫ್ಟ್ ಆಸ್ಪತ್ರೆ ಪರಿಕಲ್ಪನೆ ಚೀನಾ ಮತ್ತು ಅಮೆರಿಕಾದಲ್ಲಿ ಯಶಸ್ವಿಯಾಗಿದೆ, ಮೇಕ್ ಶಿಫ್ಟ್ ಆಸ್ಪತ್ರೆ ಪರಿಕಲ್ಪನೆಯನ್ನು ಭಾರತದಲ್ಲಿ ಜಾರಿಗೆ ತರಲು ದೇಶದಲ್ಲಿನ ವಿವಿಧ ಪ್ರತಿಷ್ಠಿತ ಖಾಸಗಿ ಕಂಪನಿಗಳು ಮುಂದಾಗಿದ್ದವು. ದೇಶಾದ್ಯಂತ 50 ಕೋವಿಡ್ ಕೇರ್ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣಕ್ಕೆ ಮುಂದಾದವು. ಇದರಲ್ಲಿ ರಾಜ್ಯಕ್ಕೆ 3 ಆಸ್ಪತ್ರೆಗಳು ಮಂಜೂರಾಗಿದ್ದು ದೊಡ್ಡಬಳ್ಳಾಪುರದಲ್ಲಿ 70 ಬೆಡ್ ಸಾಮಾರ್ಥ್ಯದ ಆಸ್ಪತ್ರೆ ನಿರ್ಮಾಣವಾಗಿದೆ.
ಕೋವಿಡ್ ಬಳಿಕ ಸಾಮಾನ್ಯ ಆಸ್ಪತ್ರೆಯಾಗಿ ಬಳಕೆ
ಕೋವಿಡ್ ಕಡಿಮೆಯಾಗಿ 3ನೇ ಅಲೆ ಬಾರದಿದ್ದಲ್ಲಿ ಮೇಕ್ ಶಿಫ್ಟ್ ಆಸ್ಪತ್ರೆಯನ್ನು ಸಾಮಾನ್ಯ ಆಸ್ಪತ್ರೆಯನ್ನಾಗಿ ಮಾರ್ಪಾಡು ಮಾಡಿ ಒಪಿಡಿ ಕೇಂದ್ರ ತೆರೆದು ಸಾರ್ವಜನಿಕರಿಗೆ ಚಿಕಿತ್ಸೆ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಗೌರಿಬಿದನೂರು, ಚಿಕ್ಕಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಕೊರಟಗೆರೆ ತಾಲೂಕಿನ ಜನರಿಗೆ ನೆರವಾಗಲಿದೆ.
ಇದನ್ನೂ ಓದಿ:ಹೊಸಕೋಟೆ ತ್ಯಾಜ್ಯ ಕೋಲಾರದ ಕ್ವಾರಿಗೆ: ಪರಿಶೀಲಿಸಲು ಕೆಎಸ್ಪಿಸಿಬಿಗೆ ಹೈಕೋರ್ಟ್ ನಿರ್ದೇಶನ