ದೇವನಹಳ್ಳಿ: ತಾಲೂಕಿನ ಬಿಎಸ್ಎಫ್ ಕ್ಯಾಂಪಸ್ನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಕ್ಯಾಂಪಸ್ಗೆ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾರಹಳ್ಳಿಯ BSF ಕ್ಯಾಂಪ್‌ನಲ್ಲಿ ಕೋವಿಡ್ ಸೋಂಕು ಹೆಚ್ಚಳ: ಸ್ಥಳಕ್ಕೆ DC ಭೇಟಿ - covid news latest news
ದೇವನಹಳ್ಳಿ ತಾಲೂಕಿನ ಬಿಎಸ್ಎಫ್ ಕ್ಯಾಂಪ್‌ನಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಇಲ್ಲಿಯ ವರೆಗೆ ಒಟ್ಟು 83 ಯೋಧರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
![ಕಾರಹಳ್ಳಿಯ BSF ಕ್ಯಾಂಪ್‌ನಲ್ಲಿ ಕೋವಿಡ್ ಸೋಂಕು ಹೆಚ್ಚಳ: ಸ್ಥಳಕ್ಕೆ DC ಭೇಟಿ BSF Camp](https://etvbharatimages.akamaized.net/etvbharat/prod-images/768-512-13144438-thumbnail-3x2-lek.jpg)
ದೇವನಹಳ್ಳಿ ತಾಲೂಕಿನ ಕಾರಹಳ್ಳಿ ಗ್ರಾಮದ ಸಮೀಪವಿರುವ ಬಿಎಸ್ಎಫ್ ಕ್ಯಾಂಪಸ್ನಲ್ಲಿ ಕೊರೊನಾ ಸೋಂಕಿತ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಮೇಘಾಲಯದಿಂದ 753 ಸಿಬ್ಬಂದಿ ಕ್ಯಾಂಪಸ್ಗೆ ಆಗಮಿಸಿದ್ದಾರೆ. ಈ 753ರಲ್ಲಿ ಮೊದಲಿಗೆ 13 ಬಿಎಸ್ಎಫ್ ಯೋಧರಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ನಂತರ ಕೋವಿಡ್ ತಪಾಸಣೆ ನಡೆಸಲಾಗಿದ್ದು, ಇಲ್ಲಿಯ ವರೆಗೆ ಒಟ್ಟು 83 ಯೋಧರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ.
ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದೆ. ಸೋಂಕು ತಗುಲಿದ ಯೋಧರನ್ನು ಆಕಾಶ್ ಆಸ್ಪತ್ರೆ ಮತ್ತು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಡಿಸಿ ಶ್ರೀನಿವಾಸ್ ತಿಳಿಸಿದ್ದಾರೆ.