ಹೊಸಕೋಟೆ: ಕುಡಿಯುವ ನೀರಿನ ತೀವ್ರ ಅಭಾವ ನೀಗಿಸಲು 5 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಉದ್ಘಾಟನೆ ಮಾಡಲಾಗಿದೆ.
ಹೊಸಕೋಟೆ ಪಟ್ಟಣದ ಜನರ ನೀರಿನ ಸಮಸ್ಯೆ ನೀಗಿಸಿದ ಶಾಸಕ - Sharat bacchegowda
ಶಾಸಕ ಶರತ್ ಬಚ್ಚೇಗೌಡ 45 ಲಕ್ಷ ಹಣದಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಮಾಡಿಸಿದ್ದು, ಕೆರೆಯಿಂದ ನಗರದ ಒವರ್ ಟ್ಯಾಂಕ್ಗಳಿಗೆ ನೇರವಾಗಿ ನೀರು ಸರಬರಾಜು ಆಗಲಿದೆ.

ಹೊಸಕೋಟೆ ಟೌನ್ ನಲ್ಲಿ ಕುಡಿಯುವ ನೀರು ಸಿಗದೆ ಜನ ಪರದಾಡುತ್ತಿದ್ದನ್ನು ತಪ್ಪಿಸುವ ನಿಟ್ಟಿನಲ್ಲಿ ನೂತನ ನೀರಿನ ಟ್ಯಾಂಕ್ ಸಂಸದ ಬಿ.ಎನ್.ಬಚ್ಚೇಗೌಡ ಉದ್ಘಾಟಿಸಿದ್ರು. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಹೊರವಲಯದ ದೊಡ್ಡಕೆರೆಯಲ್ಲಿ ಶಾಸಕ ಶರತ್ ಬಚ್ಚೇಗೌಡ 45 ಲಕ್ಷ ಹಣದಲ್ಲಿ 5 ಲಕ್ಷ ಲೀಟರ್ ಸಾಮರ್ಥ್ಯದ ಟ್ಯಾಂಕ್ ನಿರ್ಮಾಣ ಮಾಡಿಸಿದ್ದು, ಕೆರೆಯಿಂದ ನಗರದ ಒವರ್ ಟ್ಯಾಂಕ್ಗಳಿಗೆ ನೇರವಾಗಿ ನೀರು ಸರಬರಾಜು ಆಗಲಿದೆ.
ನೂತನ ಟ್ಯಾಂಕ್ ನಿರ್ಮಾಣದಿಂದ ನಗರದಲ್ಲಿ ಎರಡು ಮೂರು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಆಗಲಿದ್ದು, ಜನರು ಇನ್ಮುಂದೆ ನೀರಿಗಾಗಿ ತಾಪತ್ರಯ ಪಡುವ ಅವಶ್ಯಕತೆ ಇಲ್ಲದಂತಾಗಿದೆ.