ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಗೆ ಮತ್ತೆ ಮತ್ತೆ ಉದ್ಘಾಟನೆ ಭಾಗ್ಯ ಸಿಗುತ್ತಿದೆ. ಒಮ್ಮೆ ಪೌರಕಾರ್ಮಿಕರಿಂದ ಉದ್ಘಾಟನೆ ಮಾಡಿಸಲಾಗಿತ್ತು. ಇದೀಗ ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆ ಮಾಡಲಾಗಿದೆ. ಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸಿ ಹೊರನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಸರ್ಕಾರದಿಂದ ಪೌರಕಾರ್ಮಿಕರಿಗೆ ಅವಮಾನ ಮಾಡಲಾಗಿದೆ ಎಂದು ಪ್ರತಿಭಟಿಸಿದರು.
ದೊಡ್ಡಬಳ್ಳಾಪುರ ನಗರಸಭೆಗೆ ಮತ್ತೆ ಮತ್ತೆ ಉದ್ಘಾಟನಾ ಭಾಗ್ಯ! - Municipal Corporation Building was Inaugurated by sudhakar
ಈ ಹಿಂದೆ ದೊಡ್ಡಬಳ್ಳಾಪುರ ನಗರಸಭೆಯ ಕಾರ್ಯಾಲಯ ಕಟ್ಟಡದ ಕಾಮಗಾರಿಯನ್ನು ಪೌರಕಾರ್ಮಿಕರಿಂದ ಉದ್ಘಾಟನೆ ಮಾಡಿಸಲಾಗಿತ್ತು. ಇಂದು ಮತ್ತೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆ ನೆರವೇರಿದೆ.
ದೊಡ್ಡಬಳ್ಳಾಪುರ ನಗರಸಭೆಗೆ ಮತ್ತೆ ಮತ್ತೆ ಉದ್ಘಾಟನಾ ಭಾಗ್ಯ
ದೊಡ್ಡಬಳ್ಳಾಪುರ ನಗರಸಭೆಯ ಕಾರ್ಯಾಲಯ ಕಟ್ಟಡದ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದ್ರೂ ಉದ್ಘಾಟನೆ ಭಾಗ್ಯ ಕಂಡಿರಲಿಲ್ಲ. 4 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ಭವ್ಯ ಕಟ್ಟಡದ ಉದ್ಘಾಟನೆಗೆ ನೂರೊಂದು ವಿಘ್ನಗಳು ಬಂದಿದ್ದವು. 4ನೇ ಬಾರಿ ಸಚಿವರ ಗೈರು ಹಾಜರಿಯಿಂದ ಪೌರಕಾರ್ಮಿಕರಿಂದ ಉದ್ಘಾಟನೆಯನ್ನು ಕಾಂಗ್ರೆಸ್ ಶಾಸಕ ಟಿ.ವೆಂಕಟರಮಣಯ್ಯ ಮಾಡಿಸಿದ್ರು. ಇಂದು ಜಿಲ್ಲಾ ಉಸ್ತುವಾರಿ ಸಚಿವರಿಂದ ಉದ್ಘಾಟನೆಗೊಂಡ ನಗರಸಭೆ ಕಟ್ಟಡ ಸಾರ್ವಜನಿಕ ಸೇವೆಗೆ ಸಿದ್ಧವಾಗಿದೆ.
ಇದನ್ನೂ ಓದಿ:ಪಿಎಸ್ಐ ಅಕ್ರಮ ನೇಮಕಾತಿ: ಮತ್ತೋರ್ವ ಅಭ್ಯರ್ಥಿ ಬಂಧಿಸಿದ ಸಿಐಡಿ
Last Updated : Apr 26, 2022, 5:57 PM IST