ಕರ್ನಾಟಕ

karnataka

ETV Bharat / state

ತಿಮ್ಮರಾಯಸ್ವಾಮಿ ಜಾತ್ರೆಯಲ್ಲಿ ಯುವಕರ ನಡುವೆ ಗಲಾಟೆ... ಆ್ಯಸಿಡ್​​​​​ ಎರಚಿ ಯುವಕ ಪರಾರಿ - undefined

ತಿಮ್ಮರಾಯಸ್ವಾಮಿ ಜಾತ್ರೆಯಲ್ಲಿ ಇಬ್ಬರು ಯುವಕರ ನಡುವಿನ ಗಲಾಟೆ ತಾರಕಕ್ಕೇರಿದ ಹಿನ್ನೆಲೆ ಓರ್ವ ಯುವಕ ಜೇಬಿನಲ್ಲಿದ್ದ ಆ್ಯಸಿಡ್​​​ಅನ್ನು  ಮಣಿಕಂಠ ಎಂಬುವವನ ಮುಖ, ಕಣ್ಣಿಗೆ ಎರಚಿ ಪರಾರಿಯಾದ ಘಟನೆ ಆನೇಕಲ್​​ನಲ್ಲಿ ನಡೆದಿದೆ.

ಆ್ಯಸಿಡ್ ದಾಳಿಗೆ ಒಳಗಾದ ಯುವಕ

By

Published : Apr 12, 2019, 10:54 PM IST

ಆನೇಕಲ್: ತಿಮ್ಮರಾಯಸ್ವಾಮಿ ಜಾತ್ರೆಯಲ್ಲಿ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿದೆ. ನಂತರ ಈ ಗಲಾಟೆ ತಾರಕಕ್ಕೇರಿದ ಹಿನ್ನೆಲೆ ಓರ್ವ ಯುವಕ ಜೇಬಿನಲ್ಲಿದ್ದ ಆ್ಯಸಿಡ್​​​ಅನ್ನು ಮಣಿಕಂಠ ಎಂಬುವವನ ಮುಖ, ಕಣ್ಣಿಗೆ ಎರಚಿ ಪರಾರಿಯಾಗಿದ್ದಾನೆ.

ಆ್ಯಸಿಡ್ ಎರಚಿದವ ನಾಗರಾಜ್ ಎಂದು ತಿಳಿದು ಬಂದಿದೆ. ಮಣಿಕಂಠ ತಮಿಳುನಾಡಿನ ಕಾವೇರಿಪಟ್ಟಣಂ ಮೂಲದವನಾಗಿದ್ದು, ಆನೇಕಲ್ ಪಟ್ಟಣದ ತಿಮ್ಮರಾಯಸ್ವಾಮಿ ಗೋಪುರದ ಆರಂಭದಲ್ಲಿ ವಾಸವಿದ್ದು, ಚಿಂದಿ ಆಯುವ ಕಾಯಕದಲ್ಲಿದ್ದ. ಆರೋಪಿ ನಾಗರಾಜ್ ಬೆಂಗಳೂರಿನವನಾಗಿದ್ದು, ಇಬ್ಬರ ನಡುವೆ ಎರಡು-ಮೂರು ದಿನದ ಹಿಂದೆ ಯಾವುದೋ ಕಾರಣಕ್ಕೆ ಜಗಳ ನಡೆದಿತ್ತು.

ಆ್ಯಸಿಡ್ ದಾಳಿಗೆ ಒಳಗಾದ ಯುವಕ

ಇಂದು ಏಕಾಏಕಿ ಬಂದು ಬಾಟಲಿಯಿಂದ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ನಾಗರಾಜ್ ಪತ್ನಿಯೊಂದಿಗೆ ಜಗಳವಾಡಿದ್ದ ಮಣಿಕಂಠನ ಮೇಲೆ ಸೇಡು ತೀರಿಸಿಕೊಳ್ಳಲು ಆ್ಯಸಿಡ್ ದಾಳಿ ನಡೆದಿದೆ ಎನ್ನಲಾಗಿದೆ. ಎರಡು ಕಣ್ಣು ಮತ್ತು ಎಡ ಕೆನ್ನಯ ಮೇಲೆ ಆ್ಯಸಿಡ್ ಬಿದ್ದಿದೆ. ಸದ್ಯ ಮಣಿಕಂಠನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಆನೇಕಲ್ ಪೊಲೀಸರು ನಾಗರಾಜನಿಗೆ ಬಲೆ ಬೀಸಿದ್ದು, ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಿದ್ದಾರೆ.

For All Latest Updates

TAGGED:

ABOUT THE AUTHOR

...view details