ಕರ್ನಾಟಕ

karnataka

ETV Bharat / state

ದುಬೈನಿಂದ ಇ-ಸಿಗರೇಟ್ ಅಕ್ರಮ ಸಾಗಣೆ.. ಇಬ್ಬರು ಆರೋಪಿಗಳ ಬಂಧನ

ದುಬೈನಿಂದ ಅಕ್ರಮವಾಗಿ ಇ- ಸಿಗರೇಟ್​ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​​ ಅಧಿಕಾರಿಗಳು ಬಂಧಿಸಿದ್ದಾರೆ.

illegal-smuggling-of-e-cigarettes-from-dubai-two-arrested
ದುಬೈನಿಂದ ಇ-ಸಿಗರೇಟ್ ಅಕ್ರಮ ಸಾಗಾಟ : 41 ಲಕ್ಷ ಮೌಲ್ಯದ ಇ-ಸಿಗರೇಟ್ ಜಪ್ತಿ ..ಇಬ್ಬರ ಬಂಧನ

By

Published : Nov 28, 2022, 5:52 PM IST

ದೇವನಹಳ್ಳಿ(ಬೆಂಗಳೂರು ಗ್ರಾಮಾಂತರ) :ದುಬೈನಿಂದ ಅಕ್ರಮವಾಗಿ ಇ-ಸಿಗರೇಟ್ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಬೆಂಗಳೂರು ಕಸ್ಟಮ್ಸ್‌ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 41 ಲಕ್ಷ ಮೌಲ್ಯದ ಇ-ಸಿಗರೇಟ್ ಜಪ್ತಿ ಮಾಡಲಾಗಿದೆ.

ನ.25 ರಂದು ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರು ಪ್ರಯಾಣಿಕರನ್ನು, ಖಚಿತ ಮಾಹಿತಿಯ ಮೇರೆಗೆ ಅಧಿಕಾರಿಗಳು ತಪಾಸಣೆ ಮಾಡಿದಾಗ ಅಕ್ರಮವಾಗಿ ಇ-ಸಿಗರೇಟ್ ಗಳನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ತಕ್ಷಣ ಆರೋಪಿಗಳನ್ನು ಅಧಿಕಾರಿಗಳು ಬಂಧಿಸಿದ್ದರು.

ದುಬೈನಿಂದ ಇ-ಸಿಗರೇಟ್ ಅಕ್ರಮ ಸಾಗಣೆ.. ಆರೋಪಿಗಳ ಬಂಧನ

ಬಂಧಿತರಿಂದ ಸುಮಾರು 41,58,000 ರೂ. ಮೌಲ್ಯದ ಇ-ಸಿಗರೇಟ್ ಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ವಿರುದ್ಧ ಕಸ್ಟಮ್ಸ್‌ ಆ್ಯಕ್ಟ್ 1962ರ ಅಡಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ತನಿಖೆ ಮುಂದುವರೆದಿದೆ.

ಇದನ್ನೂ ಓದಿ :ಮೈಸೂರು: ಹಾಸ್ಟೆಲ್​ನಲ್ಲಿ ನೇಣಿಗೆ ಶರಣಾದ ಪಿಯು ವಿದ್ಯಾರ್ಥಿ

ABOUT THE AUTHOR

...view details