ಕರ್ನಾಟಕ

karnataka

ETV Bharat / state

ಅಕ್ರಮವಾಗಿ ಗಾಂಜಾ ಮಾರಾಟ: ವ್ಯಕ್ತಿಯ ಬಂಧನ - ನೆಲಮಂಗಲ ಸುದ್ದಿ

ಕಡಬಗೆರೆ ಕ್ರಾಸ್ ಬಳಿಯ ಇರುವ ಆಟೋ ಸ್ಟಾಂಪ್ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನ ಪೊಲೀಸರು ಬಂಧಿಸಿದ್ದಾರೆ.

ಅಕ್ರಮ ಗಾಂಜಾ ಮಾರಾಟ
ಅಕ್ರಮ ಗಾಂಜಾ ಮಾರಾಟ

By

Published : Sep 1, 2020, 7:40 AM IST

ನೆಲಮಂಗಲ: ಅಕ್ರಮವಾಗಿ ಗಾಂಜಾ ಮಾರಾಟ ಮಾಡಲು ಗಾಂಜಾ ಇಟ್ಟುಕೊಂಡಿದ್ದ ವ್ಯಕ್ತಿಯನ್ನ ಪೊಲೀಸರು ಬಂದಿಸಿದ್ದಾರೆ.

ಕಡಬಗೆರೆ ಕ್ರಾಸ್ ಬಳಿ ಇರುವ ಆಟೋ ಸ್ಟಾಂಪ್ ಸಮೀಪ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿದ್ದು, ವ್ಯಕ್ತಿಯನ್ನ ಬಂಧಿಸಿದಾಗ ಆತನ ಬಳಿ 300 ಗ್ರಾಂ ಗಾಂಜಾ ಪತ್ತೆಯಾಗಿದೆ. ಬಂಧಿತ ವ್ಯಕ್ತಿ ಕಡಬಗೆರೆಯ ಜನಪ್ರಿಯ ಟೌನ್​ಶಿಪ್ ನಿವಾಸಿ ಶಿವಪ್ರಸಾದ್ ಪಿ.ವಿ. ಎನ್ನಲಾಗಿದೆ. ಈ ಕುರಿತು ಎನ್​ಡಿಪಿಎಸ್ ಅಡಿ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details