ದೊಡ್ಡಬಳ್ಳಾಪುರ : ಐಎಎಸ್ ಅಧಿಕಾರಿ ಸಿ.ಎಸ್.ಕರೀಗೌಡರು, ರಸ್ತೆ ಬದಿಯಲ್ಲಿ ಕೈಯಲ್ಲಿ ಮಚ್ಚು ಹಿಡಿದು ಎಳನೀರು ಕೊಚ್ಚಿ ಕುಡಿದು ನೋಡುಗರ ಅಚ್ಚರಿಗೆ ಕಾರಣರಾಗಿದ್ದಾರೆ.
ರಸ್ತೆ ಬದಿ ನಿಂತು ಕೈಯಲ್ಲಿ ಮಚ್ಚು ಹಿಡಿದ ಐಎಎಸ್ ಅಧಿಕಾರಿ: ಏನಿದು ಅವತಾರ!! - Bangalore rural latest news
ರಸ್ತೆಬದಿಯಲ್ಲಿ ಎಳನೀರು ಮಾರಾಟ ಮಾಡುತ್ತಿದ್ದ ರೈತನನ್ನ ನೋಡಿದ ಐಎಎಸ್ ಅಧಿಕಾರಿ ಸಿ.ಎಸ್.ಕರೀಗೌಡರು, ಎಳನೀರು ಕುಡಿಯಲು ಕಾರಿನಿಂದ ಇಳಿದಿದ್ದಾರೆ. ಈ ವೇಳೆ, ಎಳನೀರು ಕೊಚ್ಚುವ ಮಚ್ಚು ಹಿಡಿದ ಅವರು ಸ್ವತಃ ತಾವೇ ಮಚ್ಚಿನಿಂದ ಎಳನೀರನ್ನು ಕೊಚ್ಚಿ ನೆರದಿದ್ದ ಜನರಲ್ಲಿ ಅಚ್ಚರಿ ಮೂಡಿಸಿದ್ದಾರೆ.
![ರಸ್ತೆ ಬದಿ ನಿಂತು ಕೈಯಲ್ಲಿ ಮಚ್ಚು ಹಿಡಿದ ಐಎಎಸ್ ಅಧಿಕಾರಿ: ಏನಿದು ಅವತಾರ!! IAS officer cut tender coconut in street side shop](https://etvbharatimages.akamaized.net/etvbharat/prod-images/768-512-7122990-thumbnail-3x2-jayjpg.jpg)
ಕೃಷಿ ಮಾರಾಟ ಇಲಾಖೆ ನಿರ್ದೇಶಕರಾದ ಸಿ.ಎಸ್. ಕರೀಗೌಡರು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದವರು. ತಮ್ಮ ಇಲಾಖೆಯ ಕೆಲಸಕ್ಕೆ ತಾಲೂಕಿನ ಕೊಡಿಗೇಹಳ್ಳಿಗೆ ಹೊರಟಿದ್ದರು. ಈ ವೇಳೆ, ರಸ್ತೆಬದಿಯಲ್ಲಿ ಎಳನೀರು ಮಾರಾಟ ಮಾಡುತ್ತಿದ್ದ ರೈತನನ್ನ ನೋಡಿದ ಅವರು ಎಳನೀರು ಕುಡಿಯಲು ಕಾರಿನಿಂದ ಇಳಿದಿದ್ದಾರೆ. ಈ ವೇಳೆ, ಎಳನೀರು ಕೊಚ್ಚುವ ಮಚ್ಚು ಹಿಡಿದ ಕರೀಗೌಡರು ಸ್ವತಃ ತಾವೇ ಮಚ್ಚಿನಿಂದ ಎಳನೀರು ಕೊಚ್ಚಿ ನೆರದಿದ್ದ ಜನರಲ್ಲಿ ಅಚ್ಚರಿ ಮೂಡಿಸಿದರು.
ಒಬ್ಬ ಐಎಎಸ್ ಅಧಿಕಾರಿಯಾಗಿ ಎಳನೀರನ್ನ ಲೀಲಾಜಾಲವಾಗಿ ಕೊಚ್ಚಿ ತಾವೊಬ್ಬ ರೈತನ ಮಗನೆಂದು ಸಾಬೀತು ಮಾಡಿದರು. ಇದೇ ಸಮಯದಲ್ಲಿ ರಾಸಾಯನಿಕ ಪಾನೀಯಗಳ ಬದಲಿಗೆ ಎಳನೀರು, ಕಬ್ಬಿನ ಹಾಲು ಕುಡಿದು ರೈತರಿಗೆ ನೆರವಾಗುವ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವಂತೆ ಯುವಕರಿಗೆ ಸಲಹೆ ನೀಡಿದರು.