ಕರ್ನಾಟಕ

karnataka

ETV Bharat / state

ದೇವನಹಳ್ಳಿ: ಹೆಂಡತಿ ಕೈಗಳನ್ನೇ ಕತ್ತರಿಸಿ ಅಮಾನವೀಯತೆ ಮೆರೆದ ಗಂಡ - husband attacks wife with knife

ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಗೊಬ್ಬರಗುಂಟೆ ಗ್ರಾಮದಲ್ಲಿ ಪತಿಯೊಬ್ಬ ತನ್ನ ಪತ್ನಿಯ ಕೈಗಳನ್ನು ಕತ್ತರಿಸಿರುವ ಅಮಾನವೀಯ ಘಟನೆ ನಡೆದಿದೆ.

ಮುನಿಕೃಷ್ಣಪ್ಪ
ಮುನಿಕೃಷ್ಣಪ್ಪ

By

Published : Mar 7, 2023, 3:58 PM IST

ದೇವನಹಳ್ಳಿ: ಹೆಂಡತಿ ಕೈಗಳನ್ನೇ ಕತ್ತರಿಸಿ ಅಮಾನವೀಯತೆ ಮೆರೆದ ಗಂಡ

ದೇವನಹಳ್ಳಿ: ಕ್ಷುಲಕ ಕಾರಣಕ್ಕೆ ಗಂಡನೇ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಮಚ್ಚಿನಿಂದ ಕೈಗಳನ್ನ ಕಟ್ ಮಾಡಿರುವ ಅಮಾನವೀಯ ಘಟನೆ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ ತಾಲೂಕಿನ ಗೊಬ್ಬರಗುಂಟೆ ಗ್ರಾಮದಲ್ಲಿ ನಡೆದಿದೆ. ಚಂದ್ರಕಲಾ (45) ಕೈಗಳನ್ನು ಕಳೆದುಕೊಂಡ ಮಹಿಳೆಯಾಗಿದ್ದು, ಗಂಡ ಮುನಿಕೃಷ್ಣಪ್ಪ ಎಂಬುವವನಿಂದ ಈ ಕೃತ್ಯ ನಡೆದಿದೆ.

ಅಂದಹಾಗೆ ಹಲ್ಲೆಗೊಳಗಾದ ಚಂದ್ರಕಲಾ ದೇವನಹಳ್ಳಿ ತಾಲೂಕಿನ ಗಂಗವಾರ ನಿವಾಸಿಯಾಗಿದ್ದು, ಕಳೆದ 20 ವರ್ಷಗಳಿಂದ ಗೊಬ್ಬರಗುಂಟೆ ಗ್ರಾಮದ ಮುನಿಕೃಷ್ಣಪ್ಪ ಎಂಬುವವನ ಜೊತೆ ಮದುವೆ ಮಾಡಿಕೊಂಡು ಹಲವು ವರ್ಷಗಳಿಂದ ಸುಖ ಸಂಸಾರ ಮಾಡ್ತಿದ್ದರು. ಇವರಿಬ್ಬರ ಮದುವೆಗೆ ಮೂರು ಮಕ್ಕಳು ಕೂಡ ಸಾಕ್ಷಿಯಿದ್ದು, ಇತ್ತೀಚಿನ ವರ್ಷಗಳಲ್ಲಿ ಮುನಿಕೃಷ್ಣಪ್ಪ ಚಂದ್ರಕಲಾಗೆ ನಿರಂತರ ಕಿರುಕುಳ ಕೊಡ್ತಿದ್ದು, ಬೇರೆ ಮನೆಯಲ್ಲಿ ಮಕ್ಕಳ ಜೊತೆ ವಾಸವಿದ್ದಳಂತೆ. ಆದರೆ ನಿನ್ನೆ ದಾರಿಯಲ್ಲಿ ನಡೆದುಕೊಂಡು ಹೋಗ್ತಿದ್ದ ಹೆಂಡತಿಯ ಮೇಲೆ ಏಕಾಏಕಿ ಗಂಡನೇ ಮಚ್ಚಿನಿಂದ ಹಲ್ಲೆಮಾಡಿ ಎರಡು ಕೈಗಳನ್ನು ಕಟ್ ಮಾಡಿ ಪೈಚಾಚಿಕ ಕೃತ್ಯ ಮೆರೆದಿದ್ದಾನೆ.

ಗಂಡನ ಕಿರುಕುಳದಿಂದ ಮನನೊಂದು ಪ್ರತ್ಯೇಕವಾಗಿ ವಾಸವಿದ್ದ ಪತ್ನಿ: ಇನ್ನು ಮದುವೆಯಾಗಿ ಐದು ವರ್ಷ ಇಬ್ಬರ ಸಂಸಾರ ಚೆನ್ನಾಗಿಯೇ ಇತ್ತು. ಮುನಿಕೃಷ್ಣ ಕೆಲಸಕ್ಕೆ ಹೋಗಿ ಬಂದ ಹಣದಿಂದ ಸಂಸಾರವನ್ನೂ ಕೂಡ ನೋಡಿಕೊಳ್ತಿದ್ದನಂತೆ. ಆದರೆ ಆ ಕೆಲಸವನ್ನ ಗಂಡ ಬಿಟ್ಟಿದ್ದರಿಂದ ಪತ್ನಿ ಗಾರ್ಮೆಂಟ್ಸ್ ಒಂದರಲ್ಲಿ ಕೆಲಸಕ್ಕೆ ಸೇರಿಕೊಂಡು ಗಂಡನನ್ನ ಕೂಡ ನೋಡಿಕೊಳ್ತಿದ್ದಳಂತೆ. ಆದರೆ ಐದಾರು ತಿಂಗಳಿನಿಂದ ಗಂಡನ ಕಿರುಕುಳದಿಂದ ಮನನೊಂದ ಹೆಂಡತಿ ತನ್ನ ಇಬ್ಬರು ಹೆಣ್ಣು ಮಕ್ಕಳು ಹಾಗೂ ಮಗನ ಜೊತೆ ಬೇರೆ ಮನೆಯೊಂದು ಮಾಡಿಕೊಂಡು ದೂರವಿದ್ದಳು.

ಹೀಗಿದ್ದು ನಿನ್ನೆ ಸಂಜೆ ಚಂದ್ರಕಲಾ ಹಾಗೂ ತನ್ನ ಮಗಳ ಜತೆ ಗಾರ್ಮೆಂಟ್ಸ್​​ನಲ್ಲಿ ಕೆಲಸ ಮುಗಿಸಿಕೊಂಡು ಆವತಿಯಿಂದ ಮನೆಗೆ ವಾಪಸ್ ಆಗ್ತಿದ್ದರು. ಈ ವೇಳೆ ಮಚ್ಚನ್ನ ಹಿಡಿದು ಮುನಿಕೃಷ್ಣ ಹೆಂಡತಿ ಹಾಗೂ ಮಗಳನ್ನ ಅಟ್ಟಾಡಿಸಿದ್ದಾನೆ. ಈ ವೇಳೆ ಮಗಳು ತಪ್ಪಿಸಿಕೊಂಡಿದ್ದು ಹೆಂಡತಿ ಮೇಲೆ ಮಾರಾಣಾಂತಿಕವಾಗಿ ಮಚ್ಚಿನಿಂದ ಹಲ್ಲೆ ಮಾಡಿದ್ದು, ಕೈ ಕಟ್ ಮಾಡಿ ಎಸ್ಕೇಪ್​ ಆಗಿದ್ದಾನೆ. ಇನ್ನು ಹಲ್ಲೆಗೊಳಗಾದ ಚಂದ್ರಕಲಾರನ್ನ ಸ್ಥಳೀಯರೇ ದೇವನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ. ಈ ಘಟನೆಯಿಂದ ಗ್ರಾಮದ ಜನರು ಬೆಚ್ಚಿಬಿದ್ದಿದ್ದಾರೆ. ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಜತೆಗೆ ಹೆಂಡತಿ ಮೇಲೆ ಹಲ್ಲೆ ಮಾಡಿ ಎಸ್ಕೇಪ್​ ಆಗಿರೋ ಮುನಿಕೃಷ್ಣಪ್ಪನಿಗೆ ಪೊಲೀಸರು ಬಲೆ ಬೀಸಿದ್ದಾರೆ.

ರಾತ್ರಿ ಮಲಗಿದ್ದ ವ್ಯಕ್ತಿ ಬೆಳಗ್ಗೆ ಶವವಾಗಿ ಪತ್ತೆ :ಇನ್ನೊಂದೆಡೆರಾತ್ರಿ ಮಲಗಿದ್ದ ವ್ಯಕ್ತಿಯೊಬ್ಬ ಬೆಳಗ್ಗೆ ಶವವಾಗಿ ಪತ್ತೆಯಾಗಿರುವ ಘಟನೆ ಆನೇಕಲ್ ತಾಲೂಕಿನ ಜಿಗಣಿಯ ಪುರಸಭೆ ಎದುರು ನಡೆದಿದೆ. ಯೋಗೀಶ್ ಶಶಿಧರ್ ಪುರದಪ್ಪ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಮೃತ ಯೋಗೀಶ್ ಮೂಲತಃ ಗದಗ ಜಿಲ್ಲೆಯ ಬೆಲ್ಲಟ್ಟಿ ಗ್ರಾಮದವನಾಗಿದ್ದು, ಇಲ್ಲಿ ಹಲವು ತಿಂಗಳಿನಿಂದ ಕೂಲಿ ಕೆಲಸ ಮಾಡಿಕೊಂಡಿದ್ದನಂತೆ. ಇಂದು ಬೆಳಗ್ಗೆ ಪುರಸಭಾ ಸಿಬ್ಬಂದಿ ನೋಡಿದಾಗ ಯೋಗಿಶ್ ಮೃತಪಟ್ಟಿರೋದು ಗೊತ್ತಾಗಿದೆ.

ಲಂಬಾಣಿ ಜನಾಂಗಕ್ಕೆ ಸೇರಿರುವ ಯೋಗೇಶ್ ಕಳೆದ ಕೆಲವು ದಿನಗಳಿಂದ ಪುರಸಭೆಯ ಮುಂದೆ ಮಲಗುತ್ತಿದ್ದ. ನಿನ್ನೆ ರಾತ್ರಿ ಮಲಗಿದ್ದವ ಉಸಿರಾಟದ ತೊಂದರೆಯಿಂದ ಮೃತಪಟ್ಟಿರುವ ಸಾಧ್ಯತೆ ಇದೆ. ಸ್ಥಳಕ್ಕೆ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ‌. ಜೊತೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ :ಚಿಕ್ಕಮಗಳೂರು: ಪತಿಯ ಮರಣಾನಂತರ ನಾಪತ್ತೆಯಾಗಿದ್ದ ಪತ್ನಿ ಶವವಾಗಿ ಪತ್ತೆ

ABOUT THE AUTHOR

...view details